Raksha Bandhan : ರಕ್ಷಾ ಬಂಧನವನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನದಂದು ಅಪರೂಪದ ಮತ್ತು ಅತ್ಯಂತ ಶುಭಕರವಾದ ‘ನವಪ೦ಚಮ ಯೋಗ’ ಸೃಷ್ಟಿಯಾಗಲಿದೆ. ಈ ಯೋಗದ ರಚನೆಯು ಕೆಲವು ನಿರ್ದಿಷ್ಟ ರಾಶಿಗಳ ಜಾತಕದಲ್ಲಿ ಶುಭಫಲಗಳನ್ನು ತರಲಿದೆ. ಅವು ಯಾವ ರಾಶಿಗಳು ಎನ್ನುವ ಮಾಹಿತಿ ಇಲ್ಲಿದೆ.
ಆರ್ಥಿಕ ಪ್ರಗತಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು, ಶನಿ ಮತ್ತು ಮಂಗಳ ಗ್ರಹಗಳಂತಹ ಪ್ರಮುಖ ಗ್ರಹಗಳ ಶುಭಸಂಯೋಜನೆಯಿಂದ ಈ ನವ ಪಂಚಮ ಯೋಗ ರೂಪುಗೊಳ್ಳುತ್ತಿದೆ. ಇಂತಹ ವಿಶೇಷ ಗ್ರಹಗಳ ಸಂಚಾರವು, ಕೆಲವು ನಿರ್ದಿಷ್ಟ ರಾಶಿಗಳಿಗೆ ವೃತ್ತಿಜೀವನದಲ್ಲಿ ಪ್ರಗತಿ, ವ್ಯವಹಾರದಲ್ಲಿ ಯಶಸ್ಸು, ಮತ್ತು ಆರ್ಥಿಕವಾಗಿ ಸದೃಢತೆಯನ್ನು ತರಲಿದೆ. ಈ ಗ್ರಹಗಳ ಶುಭ ಸಂಯೋಗವು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿರುವವರಿಗೆ ಹೆಚ್ಚಿನ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.
ಶಕ್ತಿಯುತ ಯೋಗ
ನವಪಂಚಮ ಯೋಗವು ಒಂದು ಶಕ್ತಿಯುತ ಯೋಗವಾಗಿದ್ದು, ಈ ಯೋಗದಲ್ಲಿ ಗ್ರಹಗಳು ಪರಸ್ಪರ 9 ಮತ್ತು 5ನೇ ಸ್ಥಾನಗಳಲ್ಲಿ ಇರಲಿದ್ದು, ಇದನ್ನು ಶುಭಯೋಗವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಯೋಗವು ಜ್ಞಾನ, ಸಂಪತ್ತು, ಸಂತೋಷ ಮತ್ತು ಮಕ್ಕಳ ವಿಷಯದಲ್ಲಿ ಶುಭ ಫಲಗಳನ್ನು ನೀಡುತ್ತದೆ. ರಕ್ಷಾ ಬ೦ಧನದಂತಹ ಪವಿತ್ರ ಹಬ್ಬದಂದು ಈ ಯೋಗವು ಉಂಟಾಗುವುದು ಬಹಳ ವಿರಳವಾಗಿದ್ದು, ಈ ಸಂಯೋಗದಿಂದ, ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗುವುದು ಮತ್ತು ಆಶೀರ್ವಾದಗಳು ದೊರೆಯಲಿವೆ.
ಈ ರಾಶಿಗಳು
ಮೇಷ ರಾಶಿ: ಇವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಿ, ಸಂಪತ್ತು ವೃದ್ಧಿಯಾಗುವ ಸಾಧ್ಯತೆ ಇದೆ.
ವೃಷಭ ರಾಶಿ: ವೃತ್ತಿ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಕಾಣುವ ಸಾಧ್ಯತೆ. ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳು ಸಿಗಬಹುದು.
ಸಿಂಹ ರಾಶಿ: ಇವರಿಗೆ ಹಠಾತ್ ಧನ ಲಾಭವಾಗುವ ಸಾಧ್ಯತೆ ಇದೆ. ನಿರೀಕ್ಷೆಗೂ ಮೀರಿದ ಆದಾಯ ಮತ್ತು ಆಸ್ತಿ ಹೆಚ್ಚಾಗಬಹುದು.
ತುಲಾ ರಾಶಿ: ಈ ರಾಶಿಯವರಿಗೆ ಐಷಾರಾಮಿ ಜೀವನ ಮತ್ತು ಸೌಕರ್ಯಗಳು ಸಿಗುವ ಸಾಧ್ಯತೆ ಹೆಚ್ಚಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಲಿದೆ.
ಕುಂಭ ರಾಶಿ: ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಂತೃಪ್ತಿ ದೊರೆಯಲಿದೆ. ಜೊತೆಗೆ, ಕುಟು೦ಬದಲ್ಲಿ ಹರ್ಷಭರಿತ ವಾತಾವರಣ ಉಂಟಾಗಲಿದೆ.




