Kankanabala : ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು? ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಇದನ್ನೂ ಓದಿ: Rashi bhavishya | ಈ ರಾಶಿಯವರಿಗೆ ಧನ ಹಾನಿ, ಮನಸ್ಸಿಗೆ ಚಿಂತೆ,ಕೆಲಸ ಕಾರ್ಯಗಳಲ್ಲಿ ಅಡಚಣೆ
ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ.
ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ.
2ನೇ ಮನೆಯ ಕುಟುಂಬ ಸ್ಥಾನ
4ನೇ ಮನೆ ಸುಖದ ಸ್ಥಾನ,
9ನೇ ಮನೆ ಭಾಗ್ಯದ ಸ್ಥಾನ,
11ನೇಮನೆಲಾಭಸ್ಥಾನವಾಗಿರುತ್ತದೆ.
ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ.
ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ,
ರವಿ : ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ,ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸಲಿದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಪ್ರಾಪ್ತಿ. ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ ಸಿಗುವರು. ಸಂಬಂಧದಲ್ಲಿ ವಿವಾಹ. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗ.
ಚಂದ್ರ : ಬಲಿಷ್ಠನಾಗಿದ್ದರೆ ಒಳ್ಳೆಯ ಮನಸ್ಸು ಹಾಗೂ ಸುಂದರಿಯಾಗಿರುತ್ತಾರೆ. ಪತ್ನಿಯಿಂದ ಭಾರಿ ಸುಖ, ಸಂಪತ್ತು ಪ್ರಾಪ್ತಿ. ಯುವತಿಯ ಪತಿ ಮೃದು . ಕ್ಷೀಣ ಚಂದ್ರನಿದ್ದರೆ ವಿಧುರ.ಮಾತೃ ಸಂಬಂಧದಲ್ಲಿ ವಿವಾಹ.
ಕುಜ : ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಕಂಟಕ. ಪತ್ನಿ ಧೈರ್ಯಶಾಲಿ. ಒಂದಕ್ಕಿಂತ ಹೆಚ್ಚು ವಿವಾಹ. ಸ್ತ್ರೀಯರಿಂದ ತಿರಸ್ಕಾರ. ವಿವಾಹಕ್ಕೆ ಅನೇಕ ವಿಘ್ನಗಳು. ಸಂತಾನಕ್ಕೂ ತೊಂದರೆ. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ದೋಷವಿಲ್ಲ. ಸೋದರ-ಸೋದರಿ ಕಡೆ ಸಂಬಂಧದಲ್ಲಿ ವಿವಾಹ.
ಬುಧ : ಉತ್ತಮ ಪಾಂಡಿತ್ಯ. ಗಂಡನಿಗೆ ತುಂಬಾ ಪ್ರೀತಿಸುವಳು. ವಸ್ತ್ರ ಆಭರಣ ಪ್ರಿಯ. ಪತ್ರಿಕೋದ್ಯಮ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದು. ಪಾಪಗ್ರಹದ ಜತೆ ಇದ್ದರೆ ಪತ್ನಿ ತೊಂದರೆ, ಪತ್ನಿಗೆ ಕೆಟ್ಟ ಆಲೋಚನೆಗಳು
ಮಾಡುವಳು.
ಇದನ್ನೂ ಓದಿ: Budhaditya Yoga | ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧಾದಿತ್ಯ ಯೋಗ ಹೇಗೆ ರೂಪುಗೊಳ್ಳುತ್ತದೆ? ಬುಧಾದಿತ್ಯ ಯೋಗದ ಮಹತ್ವ
ಗುರು : ಪತಿವ್ರತಾ ಪತ್ನಿ. ಪತ್ನಿಯಿಂದ ಲಾಭ. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ. ಇಲ್ಲವೆ ಇತರರಿಗೆ ಮಾರ್ಗದರ್ಶಕಳು. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ, ಉದಾರಿ.
ಶುಕ್ರ : ಶ್ರೀಮಂತೆ, ಅತಿಕಾಮಿ, ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ, ಉತ್ತಮವಾಗಿದೆ. ಕಲಾವಿದೆ, ಸಾಹಿತ್ಯಪ್ರಿಯ, ಸಂಗೀತ ಪ್ರಿಯೆ ಹೆಂಡತಿ ಸಿಗುವಳು.
ಶನಿ : ವಯಸ್ಸಾದ, ತೆಳ್ಳನೆಯ, ಕಪ್ಪನೆಯ, ಕುರೂಪಿ, ಕ್ರೂರ ಪತ್ನಿ, ಕಪತಿ-ಪತ್ನಿ ತಿರಸ್ಕಾರ, ಸ್ತ್ರೀ ಸಂಗ. ವಿವಾಹಕ್ಕೆ ವಿಳಂಬ.
ರಾಹು : ವಿಧುರ ಪ್ರಿಯೆ, ಅಸುಖಿ, ಪತ್ನಿ ಅತಿ ತುಂಬಾ ವಿದ್ಯಾವಂತೆ. ಅನ್ಯ ಜಾತಿ ಪತ್ನಿ ಸಿಗುವ ಭಾಗ್ಯ.
ಕೇತು : ಪರಜಾತಿ ಜಾತಿ ವಿವಾಹ.ವಿವಾಹ ದುರಂತ .ಸ್ತ್ರೀಯರ ವ್ಯಾಮೋಹ. ವಿವಾಹ ವಿಳಂಬ. ಮಾನ ಹಾನಿ. ಸಂಗಾತಿಯೊಂದಿಗೆ ಮನಸ್ತಾಪ.
ಸೋಮಶೇಖರ್B.Sc
Mob.93534 88403
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.