ಬೆಂಗಳೂರು (ಸಿನಿಮಾ ಸುದ್ದಿ): ‘ಕೆಜಿಎಫ್’ ಸರಣಿಯ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ (Yash) ನಟಿಸುತ್ತಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ತೀವ್ರ ಕುತೂಹಲ ಕೆರಳಿಸಿದ್ದು, ಮಾರ್ಚ್ 19 ರಂದು ತೆರೆಗಪ್ಪಳಿಸಲಿರುವ ಈ ಚಿತ್ರದ ಬಗ್ಗೆ ಈಗೊಂದು ಬಿಸಿಬಿಸಿ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದುವೇ ಚಿತ್ರಕ್ಕಾಗಿ ಯಶ್ ಪಡೆಯುತ್ತಿರುವ ಸಂಭಾವನೆ!
ಇದನ್ನೂ ಓದಿ: Toxic Teaser Released: ಗುಂಡಿನ ಸದ್ದು, ರಕ್ತದೋಕುಳಿ.. ಯಶ್ ‘ಟಾಕ್ಸಿಕ್’ ಟೀಸರ್ ನೋಡಿ ಫ್ಯಾನ್ಸ್ ಫಿದಾ!
ಬರೋಬ್ಬರಿ ₹150 ಕೋಟಿ ಸಂಭಾವನೆ?

ಹೌದು, ವರದಿಗಳ ಪ್ರಕಾರ ‘ಟಾಕ್ಸಿಕ್’ ಚಿತ್ರಕ್ಕಾಗಿ ನಟ ಯಶ್ ಬರೋಬ್ಬರಿ ₹150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟರ ಪಟ್ಟಿಗೆ ಯಶ್ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: 60 ಕೋಟಿ ಆಫರ್ ತಿರಸ್ಕರಿಸಿದ ವಿಜಯ್-ರಶ್ಮಿಕಾ: ಮದುವೆ ವಿಡಿಯೋ ಮಾರಾಟಕ್ಕಿಲ್ಲ ಎಂದ ಜೋಡಿ!
ಬರೀ ನಟನಲ್ಲ, ಸಹ-ನಿರ್ಮಾಪಕ ಕೂಡ!
ವಿಶೇಷವೆಂದರೆ, ಯಶ್ ಕೇವಲ ನಾಯಕರಾಗಿ ಮಾತ್ರವಲ್ಲದೆ ಈ ಚಿತ್ರಕ್ಕೆ ಸಹ-ನಿರ್ಮಾಪಕರೂ (Co-producer) ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ್ (Venkat K Narayana) ಅವರ ಜೊತೆಗೂಡಿ ಯಶ್ ಈ ಬೃಹತ್ ಪ್ರಾಜೆಕ್ಟ್ ಅನ್ನು ನಿರ್ಮಿಸುತ್ತಿದ್ದಾರೆ.
ಹೀಗಾಗಿ ಕೇವಲ ಸಂಭಾವನೆ ಮಾತ್ರವಲ್ಲದೆ, ಸಿನಿಮಾ ಬಿಡುಗಡೆಯಾದ ಬಳಿಕ ಬರುವ ಲಾಭದಲ್ಲೂ ಯಶ್ ದೊಡ್ಡ ಪಾಲು ಪಡೆಯಲಿದ್ದಾರೆ ಎನ್ನಲಾಗಿದ್ದು, ಒಟ್ಟಾರೆಯಾಗಿ ಈ ಚಿತ್ರದಿಂದ ಅವರ ಒಟ್ಟು ಗಳಿಕೆ ₹150 ಕೋಟಿಗಿಂತಲೂ ಅಧಿಕವಾಗಿರಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಂದಾಜಿಸಿದ್ದಾರೆ. ಒಟ್ಟಿನಲ್ಲಿ ರಾಕಿಭಾಯ್ ಹವಾ ಬಾಕ್ಸ್ ಆಫೀಸ್ ಮಾತ್ರವಲ್ಲ, ಸಂಭಾವನೆಯಲ್ಲೂ ಹೊಸ ದಾಖಲೆ ಬರೆಯುತ್ತಿದೆ.
ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಾಕಿ ಭಾಯ್: ವಿದೇಶದಲ್ಲಿ ಟಾಕ್ಸಿಕ್ ಹವಾ! ಕೆಜಿಎಫ್ ಮೀರಿಸುವ ಬ್ಯುಸಿನೆಸ್ ಮಾಡುತ್ತಾ ಯಶ್ ಸಿನಿಮಾ?




