ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಸಂಜಯ್ ದತ್ ಅಭಿನಯದ ಕೆಜಿಎಫ್ ಚಾಪ್ಟರ್ 2, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಕ ಮಾಡಿದ್ದು, ಈ ಚಿತ್ರ ಜುಲೈ 16 ರಂದು ಬಿಡುಗಡೆಯಾಗಲಿದೆ ಚಿತ್ರತಂಡ ಘೋಷಿಸಿದೆ.
ಈ ಘೋಷಣೆಯ ನಂತರ, ಟ್ವಿಟ್ಟರ್ ನಲ್ಲಿ ಯಶ್ ಅವರ ಅಭಿಮಾನಿಗಳ ಗುಂಪು ಕೆಜಿಎಫ್ ಚಾಪ್ಟರ್ 2 ಬಿಡುಗಡೆಯ ದಿನದಂದು “ರಾಷ್ಟ್ರೀಯ ರಜಾದಿನ ( ನ್ಯಾಷನಲ್ ಹಾಲಿಡೇ) ವಾಗಿ ಘೋಷಿಸಲು ಪಿಎಂ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, “ನಾವೆಲ್ಲರೂ ತಿಳಿದಿರುವಂತೆ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಶುಕ್ರವಾರ 16/7/2021 ರಂದು ಬಿಡುಗಡೆಯಾಗುತ್ತಿದೆ.”
“ಜನರು ಕೆಜಿಎಫ್ 2 ಸಿನಿಮಾಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದು, ಆ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಲು ನಾವು ನಿಮ್ಮನ್ನು ವಿನಂತಿಸುತ್ತಿದ್ದೇವೆ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇದು ಕೇವಲ ಸಿನಿಮಾವಲ್ಲ ಅದು ನಮ್ಮ ಭಾವನೆ ”ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೆಜಿಎಫ್ 2 ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು , ಇದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Dear @PMOIndia @narendramodi sir Consider Fans Emotion🥰😁 And Declare National Holiday On 16/7/2021💥#KGFChapter2 #YashBOSS #KGFChapter2onJuly16 pic.twitter.com/1Idm64pgwV
— Rocking Styles (@styles_rocking) January 30, 2021