ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದು, ರಾ ರಾ ರಕ್ಕಮ್ಮ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.
ಸಿನಿಪಂಡಿತರು ಮತ್ತು ಒರ್ಮ್ಯಾಕ್ಸ್ ವರದಿಯ ಪ್ರಕಾರ, ವಿಕ್ರಾಂತ್ ರೋಣ ಚಿತ್ರದ ಮೊದಲ ದಿನದ ಕಲೆಕ್ಷನ್ 16ರಿಂದ 20 ಕೋಟಿ ಎಂದು ಹೇಳಲಾಗಿದೆ. ಇನ್ನು, ಕರ್ನಾಟಕದಲ್ಲಿ, 14.85 ಕೋಟಿ, ಆಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿ 2.2ಕೋಟಿ, ತಮಿಳುನಾಡು 1 ಕೋಟಿ, ಕೇರಳ 0.15 ಕೋಟಿ ಮತ್ತು ಸಾಗರೋತ್ತರ ದೇಶಗಳಲ್ಲಿ 3 ಕೋಟಿ ಸೇರಿ ಒಟ್ಟು ವಿಕ್ರಾಂತ್ ರೋಣ ಮೊದಲ ದಿನ 21.2 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಗ್ಲಾಮರ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್ , ನಿರೂಪ್ ಬಂಡಾರಿ, ನೀತಾ ಅಶೋಕ್, ರವಿಶಂಕರ ಗೌಡ, ಮಧುಸೂದನ್ ರಾವ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.