ಕನ್ನಡ ಚಿತ್ರರಂಗದಿಂದ ನಟಿ ರಶ್ಮಿಕಾ ಬ್ಯಾನ್: ರಶ್ಮಿಕಾ ಕನ್ನಡದ ಹುಡಿಗಿ ಎಂದ ಡಾಲಿ; ರಶ್ಮಿಕಾ ಹೇಳಿದ್ದೇನು?

ಕನ್ನಡದ ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಬ್ಯಾನ್ ಬಗ್ಗೆ ಡಾಲಿ ಧನಂಜಯ್ ಖಡಕ್ ರಿಯಾಕ್ಷನ್ ಕೊಟ್ಟಿದ್ದು, ರಶ್ಮಿಕಾ ಕನ್ನಡದ ಹುಡುಗಿ. ಬ್ಯಾನ್ ಯಾಕೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ…

rashmika mandanna vijayaprabha news

ಕನ್ನಡದ ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಬ್ಯಾನ್ ಬಗ್ಗೆ ಡಾಲಿ ಧನಂಜಯ್ ಖಡಕ್ ರಿಯಾಕ್ಷನ್ ಕೊಟ್ಟಿದ್ದು, ರಶ್ಮಿಕಾ ಕನ್ನಡದ ಹುಡುಗಿ. ಬ್ಯಾನ್ ಯಾಕೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಚಿತ್ರರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಬದುಕಿದೆ. ಯಾರು ಯಾರನ್ನು ಬರಬೇಡಿ ಎಂದು ಹೇಳೋದಕ್ಕೆ ಆಗಲ್ಲ. ಸಣ್ಣ ಪುಟ್ಟ ತಪ್ಪಾಯ್ತಾ ಅಂದಾಕ್ಷಣ ಮನೆ ಮಕ್ಕಳನ್ನು ಹೊರಗೆ ಹಾಕ್ತೀರಾ ಇಲ್ಲವಲ್ಲ. ಅವರು ಎಲ್ಲಿದ್ದರೂ ಕೂಡಾ ಕನ್ನಡದ ಹುಡಿಗಿನೇ ಎಂದಿದ್ದಾರೆ.

ಕನ್ನಡ ಚಿತ್ರರಂಗದಿಂದ ಬ್ಯಾನ್: ರಶ್ಮಿಕಾ ಹೇಳಿದ್ದೇನು.. ?

Vijayaprabha Mobile App free

ಇನ್ನು, ಕನ್ನಡ ಚಿತ್ರರಂಗ ತನ್ನನ್ನು ಬ್ಯಾನ್ ಮಾಡಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದು, ‘ಕಾಂತಾರ’ ಸಿನಿಮಾ ವಿಷಯದಲ್ಲಿ ಕೆಲವರು ನನ್ನ ಮೇಲೆ ಅತ್ಯುತ್ಸಾಹ ತೋರಿದ್ದಾರೆ ಎಂದು ಹೇಳಿದ್ದಾರೆ.

ಇನ್ನು, ‘ಕಾಂತಾರ’ ಸಿನಿಮಾ ನೋಡಿ ಚಿತ್ರ ಯೂನಿಟ್ ಗೆ ಮೆಸೇಜ್ ಮಾಡಿದ್ದೇನೆ. ನಮ್ಮ ನಡುವೆ ಏನಾಗುತ್ತಿದೆ ಎಂದು ಜಗತ್ತಿಗೆ ಗೊತ್ತಿಲ್ಲ. ನನ್ನ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆ ಮೆಸೇಜ್ ಗಳನ್ನು ಹೊರಹಾಕುವುದಿಲ್ಲ, ನನ್ನ ವೈಯಕ್ತಿಕ ಜೀವನ ಜನರಿಗೆ ಅನವಶ್ಯಕ ಎಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.