ಹೈದರಾಬಾದ್: ಟಾಲಿವುಡ್ ಮಾಸ್ ಮಹಾರಾಜಾ ನಟ ರವಿತೇಜ ಅವರ ‘ನೇಲಾ ಟಿಕೆಟು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಟಾಲಿವುಡ್ ಪ್ರವೇಶ ಮಾಡಿದ್ದ ನಟಿ ಮಾಳವಿಕಾ ಶರ್ಮಾ, ನಟ ರಾಮ್ ಅಭಿನಯದ ‘ರೆಡ್’ ಸಿನಿಮಾದಲ್ಲಿ ಅಭಿನಯಿಸಿದ್ದು ಈ ಚಿತ್ರ ಜನವರಿ 14 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಪ್ರಚಾರದ ಅಂಗವಾಗಿ ವಿವಿಧ ಸಂದರ್ಶನಗಳಲ್ಲಿ ಭಾಗವಹಿಸುತ್ತಿರುವ ಮಾಳವಿಕಾ, ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಮೇಲೆ ಬಾಯಿ ತೆರೆದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕಾಸ್ಟಿಂಗ್ ಕೌಚ್ ಸಿನಿ ಕ್ಷೇತ್ರವನ್ನು ಕಾಡುತ್ತಿದೆ. ಮಾಧ್ಯಮಗಳಲ್ಲಿ ಯಾರಾದರೂ ಮುಂದೆ ಬಂದು ಕಾಸ್ಟಿಂಗ್ ಕೌಚ್ ಬಗ್ಗೆ ಮಾಡುವುದನ್ನು ನಾವು ನೋಡುತ್ತೇವೆ. ಕೆಲವು ನಾಯಕಿಯರು ಕಾಸ್ಟಿಂಗ್ ಕೌಚ್‌ನಿಂದ ಮೋಸ ಹೋಗಿದ್ದೇವೆ ಎಂದು ಹೇಳಿದರೆ, ಇನ್ನು ಕೆಲವರು ಸಿನಿ ಉದ್ಯಮದಲ್ಲಿ ಅಂತಹದ್ದೇನೂ ಇಲ್ಲ ಎಂದು ನಿರಾಕರಿಸುತ್ತಿದ್ದಾರೆ.
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ನಾಯಕಿ ಮಾಳವಿಕಾ ಶರ್ಮಾ ಅವರನ್ನು ಪ್ರಶ್ನಿಸಿದ್ದು, ಅಂತಹ ಯಾವುದೇ ಘಟನೆ ನನಗೆ ನಡೆದಿಲ್ಲ ಎಂದು ಹೇಳಿದ್ದು, ಬೇರೆಯವರಿಗೆ ಎದುರಾಗಿದೆಯೇ? ಉದ್ಯಮದಲ್ಲಿ ಕಾಸ್ಟಿಂಗ್ ಕೋಚ್ ಆಗಿರುವ ಬಗ್ಗೆ ನಾನು ಏನನ್ನು ಹೇಳಲಾರೆ ಎಂದು ಹೇಳಿದ್ದಾರೆ.
ಇನ್ನು ರೆಡ್ ಸಿನಿಮಾವನ್ನು ನಿರ್ದೇಶಕ ಕಿಶೋರ್ ತಿರುಮಲಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಮಾಳವಿಕಾ ನಟ ರಾಮ್ ಜೊತೆಯಾಗಿ ಮಾಳವಿಕಾ ಶರ್ಮಾ, ನಿವೇದಾ ಪೆತುರಾಜ್, ಮತ್ತು ಅಮೃತ ಅಯ್ಯರ್ ಮೂರು ಜನ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಶ್ರವಂತಿ ಬ್ಯಾನರ್ ಅಡಿಯಲ್ಲಿ ಶ್ರವಂತಿ ರವಿಕಿಶೋರ್ ನಿರ್ಮಿಸುತ್ತಿದ್ದು, ಮಣಿಶರ್ಮ ಸಂಗೀತ ನೀಡಿದ್ದಾರೆ.