60 ಕೋಟಿ ಆಫರ್ ತಿರಸ್ಕರಿಸಿದ ವಿಜಯ್-ರಶ್ಮಿಕಾ: ಮದುವೆ ವಿಡಿಯೋ ಮಾರಾಟಕ್ಕಿಲ್ಲ ಎಂದ ಜೋಡಿ!

ಹೈದರಾಬಾದ್: ಟಾಲಿವುಡ್‌ನ ಕ್ಯೂಟ್ ಕಪಲ್ ಎಂದೇ ಕರೆಯಲ್ಪಡುವ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಈ…

Vijayaprabha Entertainment News: Vijay Deverakonda and Rashmika Mandanna reject 60 Crore Netflix offer for wedding streaming rights. Couple photo with Kannada text.

ಹೈದರಾಬಾದ್: ಟಾಲಿವುಡ್‌ನ ಕ್ಯೂಟ್ ಕಪಲ್ ಎಂದೇ ಕರೆಯಲ್ಪಡುವ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಈ ಜೋಡಿ ಒಟಿಟಿ ಸಂಸ್ಥೆಯೊಂದು ನೀಡಿದ ಕೋಟ್ಯಂತರ ರೂಪಾಯಿ ಆಫರ್ ಅನ್ನು ತಿರಸ್ಕರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಫೆಬ್ರವರಿ 26ಕ್ಕೆ ಮದುವೆ?

Vijayaprabha Entertainment News: Vijay Deverakonda and Rashmika Mandanna reject 60 Crore Netflix offer for wedding streaming rights. Couple photo with Kannada text.
ಮದುವೆ ವಿಡಿಯೋ ಮಾರಾಟಕ್ಕಿಲ್ಲ: ಟಾಲಿವುಡ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ತಮ್ಮ ಮದುವೆ ವಿಡಿಯೋ ಹಕ್ಕುಗಳಿಗಾಗಿ (Streaming Rights) ಒಟಿಟಿ ದಿಗ್ಗಜ ‘ನೆಟ್‌ಫ್ಲಿಕ್ಸ್’ ನೀಡಿದ್ದ ಬರೋಬ್ಬರಿ ₹60 ಕೋಟಿ ಆಫರ್ ಅನ್ನು ತಿರಸ್ಕರಿಸಿದ್ದಾರೆ.

ಹೌದು, ಮೂಲಗಳ ಪ್ರಕಾರ, ಈ ಸ್ಟಾರ್ ಜೋಡಿ ಇದೇ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ (Udaipur) ಅದ್ದೂರಿಯಾಗಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಮದುವೆ ಸಿದ್ಧತೆಗಳು ಗುಟ್ಟಾಗಿ ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ನೆಟ್‌ಫ್ಲಿಕ್ಸ್ ನೀಡಿದ ಆಫರ್ ಏನು?

ಸೆಲೆಬ್ರಿಟಿಗಳ ಮದುವೆ ವಿಡಿಯೋಗಳನ್ನು ಒಟಿಟಿಯಲ್ಲಿ ಪ್ರಸಾರ ಮಾಡುವುದು ಈಗಿನ ಟ್ರೆಂಡ್ ಆಗಿದ್ದು, ವಿಜಯ್ ಮತ್ತು ರಶ್ಮಿಕಾ ಅವರ ಮದುವೆಯ ವಿಡಿಯೋ ಸ್ಟ್ರೀಮಿಂಗ್ ಹಕ್ಕುಗಳನ್ನು (Streaming Rights) ಖರೀದಿಸಲು ಪ್ರಮುಖ ಒಟಿಟಿ ಸಂಸ್ಥೆ ‘ನೆಟ್‌ಫ್ಲಿಕ್ಸ್’ (Netflix) ಬರೋಬ್ಬರಿ ₹60 ಕೋಟಿ ಆಫರ್ ನೀಡಿತ್ತಂತೆ!

Vijayaprabha Mobile App free

ಆಫರ್ ತಿರಸ್ಕರಿಸಿದ್ದೇಕೆ?

ಆದರೆ, ವಿಜಯ್ ಮತ್ತು ರಶ್ಮಿಕಾ ಈ ಬೃಹತ್ ಮೊತ್ತದ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದ್ದು, “ಮದುವೆ ಎಂಬುದು ನಮ್ಮ ವೈಯಕ್ತಿಕ ಮತ್ತು ಖಾಸಗಿ ವಿಷಯ. ಅದನ್ನು ಹಣಕ್ಕಾಗಿ ಮಾರಾಟ ಮಾಡಲು ಅಥವಾ ಎಲ್ಲರಿಗೂ ತೋರಿಸಲು ನಮಗೆ ಇಷ್ಟವಿಲ್ಲ,” ಎಂದು ಈ ಜೋಡಿ ಹೇಳಿರುವುದಾಗಿ ವರದಿಯಾಗಿದ್ದು, ಅಭಿಮಾನಿಗಳು ಇವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಧು ಕೋಕಿಲ, ಮಂಡ್ಯ ರಮೇಶ್‌ಗೆ ಬಿಗ್ ರಿಲೀಫ್: ಲೈಂಗಿಕ ದೌರ್ಜನ್ಯ ಕೇಸ್ ರದ್ದುಗೊಳಿಸಿದ ಹೈಕೋರ್ಟ್!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply