ಕನ್ನಡ ಕಿರುತರೆಯಲ್ಲಿನ ಜನಪ್ರೀಯ ಶೋ ಅಂದರೆ ಅದು “ಬಿಗ್ ಬಾಸ್ ಕನ್ನಡ” ಶೋ ಎನ್ನಬಹುದು. ಇದೀಗ ಅದು ‘ಒಟಿಟಿ’ ದಿನಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಇದರ ಜೊತೆಗೆ ಸ್ಪರ್ಧೆ ಕೂಡ ಹೆಚ್ಚುತ್ತಿದೆ. ಈ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರ ನಡೆದಿದ್ದಾರೆ.
ಹೌದು, ಬಿಗ್‌ಬಾಸ್ ಓಟಿಟಿ ರಿಯಾಲಿಟಿ ಶೋನಿಂದ ಈ ವಾರ ಉದಯ್ ಸೂರ್ಯ ಹೊರನಡೆದಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಉದಯ್ ಸೂರ್ಯ ಬಿಗ್‌ಬಾಗ್ ಮನೆಯಲ್ಲಿರುವ ಇತರ ಸ್ಪರ್ಧಿಗಳ ಸ್ನೇಹ ಕುರಿತಾಗಿ ಕೆಟ್ಟದಾಗಿ ಮಾತನಾಡಿದ್ದರು. ಉದಯ್ ನಡೆಗೆ ಮನೆಯ ಮಂದಿ ಬೇಸರ ಹೊರಹಾಕಿದ್ದರು. ಉದಯ್ ಆಡಿರುವ ಮಾತೇ ಅವರಿಗೆ ಮುಳುವಾಗಿ, ಮೂರೇ ವಾರಕ್ಕೆ ದೊಡ್ಮನೆ ಪಯಣ ಅಂತ್ಯವಾಗಿದೆ. ಇವರು ರಾಮಾಚಾರಿ ಧಾರಾವಾಹಿಯಲ್ಲಿ ನಟಿಸುತ್ತಾ ಖ್ಯಾತಿ ಗಳಿಸಿದ್ದರು.
ಇನ್ನು, ಈ ವಾರ ಉದಯ್ ಸೂರ್ಯ ಹೊರನಡೆದಿದ್ದು ಈ ಮೂಲಕ ದೊಡ್ಮನೆ ಸೇರಿದ್ದ 16 ಮಂದಿಯಲ್ಲಿ ಇದೀಗ 11 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನು ಕೇವಲ 3 ವಾರಗಳ ಕಾಲ ಬಾಕಿಯಿದ್ದು, ಈಗ ಮತ್ತಷ್ಟು ಕೂತುಹಲ ಮೂಡುತ್ತಿದೆ.