ಕನ್ನಡದ ಸಿನಿ ಅಭಿಮಾನಿಗಳು ಹೆಚ್ಚು ಪ್ರೀತಿಸುವ ಜೂನ್ ತಿಂಗಳ ನಟರ ಟಾಪ್-5 ಪಟ್ಟಿಯನ್ನು ಪ್ರತಿಷ್ಟಿತ Ormax ಮೀಡಿಯಾ ರಿಲೀಸ್ ಮಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಮೊದಲ ಸ್ಥಾನದಲ್ಲಿ ಇದ್ದಾರೆ.
ಇನ್ನು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 2ನೇ ಸ್ಥಾನದಲ್ಲಿದ್ದು, ‘#777 ಚಾರ್ಲಿ’ ಸಿನಿಮಾದಿಂದ ಮೋಡಿ ಮಾಡಿರುವ ರಕ್ಷಿತ್ ಶೆಟ್ಟಿ 3ನೇ ಸ್ಥಾನದಲ್ಲಿದ್ದಾರೆ. ಆದರೆ, ಅತಿಹೆಚ್ಚು ಫ್ಯಾನ್ಸ್ ಹೊಂದಿರುವ ನಟ ದರ್ಶನ್ 4ನೇ ಸ್ಥಾನದಲ್ಲಿದ್ದು, ಶಿವಣ್ಣ ಟಾಪ್-5ರಲ್ಲಿ ಇದ್ದಾರೆ.
ನಟಿ ರಶ್ಮಿಕಾ ಅಂದ್ರೆ ತುಂಬಾ LOVE..!
ಇನ್ನು, ಸಿನಿ ಅಭಿಮಾನಿಗಳು ತುಂಬಾ ಇಷ್ಟಪಡುವ ಸ್ಯಾಂಡಲ್‍ವುಡ್ ನಟಿಯರ (ಜೂನ್) ಟಾಪ್-5 ಪಟ್ಟಿಯನ್ನು Ormax Media ರಿಲೀಸ್ ಮಾಡಿದ್ದು, ಅದರಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಎರಡನೇ ಸ್ಥಾನದಲ್ಲಿದ್ದು, ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದಿದ್ದರೂ ರಾಧಿಕಾ ಪಂಡಿತ್ ಟಾಪ್ 3ರಲ್ಲಿದ್ದು, ಒಂದು ಕಾಲದ ಕನ್ನಡದ ಟಾಪ್ ನಟಿ ರಮ್ಯಾ 4ನೇ ಸ್ಥಾನದಲ್ಲಿದ್ದಾರೆ. ಯುವನಟಿ ಆಶಿಕಾ ರಂಗನಾಥ್ 5ನೇ ಸ್ಥಾನ ಪಡೆದುಕೊಂಡಿರುವುದು ವಿಶೇಷ.