ಟಾಲಿವುಡ್ ನ ಅತ್ಯಧಿಕ ಸಂಭಾವನೆ ಪಡೆದು ಸ್ಟಾರ್ ಹೀರೋಯಿನ್ ಪಟ್ಟ ಅನುಭವಿಸಿದ ನಟಿಯರಲ್ಲಿ ಗೋವಾ ಬ್ಯೂಟಿ ಇಲಿಯಾನಾ ಕೂಡ ಒಬ್ಬರು. ಬಹಳ ದಿನಗಳಲಿಂದ ಸಿನಿಮಾ ರಂಗದಿಂದ ದುಅರವಿಂದ ಇಲಿಯಾನಾ ಮತ್ತೊಮ್ಮೆ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿ ವಲಯದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಜೊತೆ ಇಲಿಯಾನಾ ಮತ್ತೊಮ್ಮೆ ಪ್ರೇಕ್ಷಕರಿಗೆ ‘ಕಿಕ್’ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ಕೂಡ ಐಟಂ ಸಾಂಗ್ ಮೂಲಕ.
ವಿವರಗಳ ಪ್ರಕಾರ, ರವಿತೇಜ ನಾಯಕನಾಗಿ ‘ರಾಮರಾವ್ ಆನ್ ಡ್ಯೂಟಿ’ ಎಂಬ ಸಿನಿಮಾ ತಯಾರಾಗುತ್ತಿದ್ದು, ಇದನ್ನು ಶರತ್ ಮಾಂಡವ ನಿರ್ದೇಶಿಸಿದ್ದಾರೆ. ಇದರಲ್ಲಿ ಇಲಿಯಾನಾ ಐಟಂ ಸಾಂಗ್ ಮಾಡಲಿದ್ದಾರೆ. ಟಾಲಿವುಡ್ ಟಾಪ್ ನಟಿಯರಾದ ತಮನ್ನಾ, ಸಮಂತಾ ಮುಂತಾದ ನಾಯಕಿಯರೂ ಐಟಂ ಸಾಂಗ್ ಮಾಡುತ್ತಿದ್ದು, ಈಗ ಅವರ ಹಾದಿಯಲ್ಲಿ ಇಲಿಯಾನಾ ಹೆಜ್ಜೆ ಹಾಕುತ್ತಿದ್ದಾರೆ.
ಮಹೇಶ್, ಎನ್ ಟಿಆರ್, ಅಲ್ಲು ಅರ್ಜುನ್ ಮುಂತಾದ ಸ್ಟಾರ್ ಹೀರೋಗಳ ಎದುರು ನಟಿಸಿದ್ದ ಸೈಜ್ ಝೀರೋ ಬ್ಯೂಟಿ ಇಲಿಯಾನಾ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದರು. ಅಲ್ಲಿಯೂ ಒಳ್ಳೆ ಹೆಸರು ಮಾಡುತ್ತಿರುವಾಗಲೇ ಇಲಿಯಾನಾ ಪ್ರೇಮದ ಬಲೆಗೆ ಬಿದ್ದಳು. ಸಿನಿಮಾ ಮತ್ತು ಪ್ರೀತಿಯನ್ನು ನಿಭಾಯಿಸಲು ಇಲಿಯಾನಾಗೆ ಸಾಧ್ಯವಾಗಲಿಲ್ಲ. ಇದರಿಂದ ಚಿತ್ರರಂಗದಿಂದ ದೂರವಾದ ನಟಿ ತನ್ನ ದೇಹದ ಮೇಲೆ ಹಿಡಿತ ಕಳೆದುಕೊಂಡಳು.ಇದರೊಂದಿಗೆ ಇಡೀ ನೋಟವೇ ಬದಲಾಯಿತು. ಅದೇ ಸಮಯದಲ್ಲಿ, ಪ್ರೀತಿ ಮುರಿದು ಖಿನ್ನತೆಗೆ ಒಳಗಾದಳು. ಆದರೆ ಬಹಳ ಕಷ್ಟಪಟ್ಟು ಖಿನ್ನತೆಯಿಂದ ಹೊರಬಂದಳು. ಇನ್ನು ತುಂಬಾ ಕಷ್ಟಪಟ್ಟು ವರ್ಕ್ ಔಟ್ ಮಾಡಿ ತನ್ನ ದೇಹದ ಸೌಂದರ್ಯವನ್ನು ಹಳೆಯ ಸ್ಥಿತಿಗೆ ತರಲು ಪ್ರಯತ್ನಿಸಿ ಸ್ವಲ್ಪ ಸಣ್ಣಗಾಗಿದ್ದಾಳೆ.
ಸಿನಿಮಾ ಟ್ರ್ಯಾಕ್ ಮಿಸ್ ಮಾಡಿಕೊಂಡಿದ್ದು, ಗ್ಲಾಮರ್ ಕ್ಷೇತ್ರದ ಹೊಸ ಹೀರೋಯಿನ್ ಗಳು ಬಂದಿದ್ದು, ಇದರೊಂದಿಗೆ ನಿರ್ಮಾಪಕರು ಇಲಿಯಾನಾ ಅವರನ್ನು ಕಡೆಗಣಿಸುವುದನ್ನು ಆರಂಭಿಸಿದ್ದರು. ಈ ನಡುವೆ ತೆಲುಗಿನಲ್ಲಿ ರವಿತೇಜಾ ಅಭಿನಯದ ಅಮರ್ ಅಕ್ಬರ್ ಆಂಟೋನಿಯಲ್ಲಿ ಜೋಡಿ ಕಟ್ಟಿನ ಸಿನಿಮಾ ಡಿಸಾಸ್ಟರ್ ಆಗಿತ್ತು. ಇದರಿಂದ ಮತ್ತೆ ಬಹುಕಾಲ ಸಿನಿಮಾದಿಂದ ದೂರ ಉಳಿದಿದ್ದರು. ಆದರೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದರು .
ಇನ್ನು, ನಟಿ ಇಲಿಯಾನಾ ಬೀಚ್‌ನಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ಸೌಂದರ್ಯ ಸ್ಪರ್ಧೆ ಪೋಸ್ಟ್ ಮಾಡಿದ್ದಾರೆ. ಇನ್ನು,ನಟಿ ಇಲಿಯಾನಾ ಇತ್ತೀಚಿನ ಕೆಂಪು ಬಿಕಿನಿಯಲ್ಲಿ ಪೋಸ್ಟ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿದ್ದಾಳೆ.
View this post on Instagram