ಇಂದು ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಕರ್ನಾಟಕದ ಅಮರೆಶ್ವರ ಶಿಬಿರದ ಮಾನವಿ ತಾಲೂಕು, ರಾಯಚೂರುನಲ್ಲಿ ಜಿಲ್ಲೆಯಲ್ಲಿ 1973 ಅಕ್ಟೋಬರ್ 10 ರಂದು ಜನಿಸಿದರು. ಎಸ್ ಎಸ್ ರಾಜಮೌಳಿಯವರನ್ನು ಮೊದಲು ತೆಲುಗಿನ ಖ್ಯಾತ…

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಕರ್ನಾಟಕದ ಅಮರೆಶ್ವರ ಶಿಬಿರದ ಮಾನವಿ ತಾಲೂಕು, ರಾಯಚೂರುನಲ್ಲಿ ಜಿಲ್ಲೆಯಲ್ಲಿ 1973 ಅಕ್ಟೋಬರ್ 10 ರಂದು ಜನಿಸಿದರು.

ಎಸ್ ಎಸ್ ರಾಜಮೌಳಿಯವರನ್ನು ಮೊದಲು ತೆಲುಗಿನ ಖ್ಯಾತ ನಿರ್ದೇಶಕ ಕೆ.ರಾಘವೇಂದ್ರ ರಾವ್ ಅವರು ಸಹಾಯಕ ನಿರ್ದೇಶಕರಾಗಿ ಪರಿಚಯಿಸಿದರು. ಹಾಗೆ ಅವರ ಮಾರ್ಗದರ್ಶನದಲ್ಲಿ ಮೊದಲು ಧಾರಾವಾಹಿಗಳನ್ನು ನಿರ್ದೇಶಿಸಿ 2001ರಲ್ಲಿ ಮೊದಲ ಬಾರಿಗೆ ಪೂರ್ತಿ ಪ್ರಮಾಣದ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಸ್ಟೂಡೆಂಟ್ ನಂಬರ್ 1 ಸಿನಿಮಾವನ್ನು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಈ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ನಾಯಕನಾಗಿ ನಟಿಸಿದ್ದರು.

ರಾಜಮೌಳಿಯವರು ತೆಲುಗಿನಲ್ಲಿ ಸ್ಟೂಡೆಂಟ್ ನಂ 1, ಛತ್ರಪತಿ, ಸೈ, ಸಿಂಹಾದ್ರಿ, ವಿಕ್ರಮಾರ್ಕುಡು, ಯಮದೊಂಗ, ಮಗಧೀರ, ಬಾಹುಬಲಿ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಮಾಡಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ರಾಜಮೌಳಿ ಅವರ ಉತ್ತಮ ನಿರ್ದೇಶನಕ್ಕೆ ಸೈಮಾ ಅವಾರ್ಡ್, ನಂದಿ ಅವಾರ್ಡ್, ಐಫಾ ಅವಾರ್ಡ್, ನ್ಯಾಷನಲ್ ಫಿಲಂ ಅವಾರ್ಡ್ ಗಳು ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Vijayaprabha Mobile App free

ಸದ್ಯ ರಾಜಮೌಳಿ ಅವರು ತೆಲುಗಿನ ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ್ ಅಭಿನಯದ ಬಹುನಿರೀಕ್ಷಿತ ಆರ್ ಆರ್ ಆರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ.

ಇದನ್ನು ಓದಿ: ಅಕ್ಷಯ್ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್’ ಸಿನಿಮಾದ ಟ್ರೈಲರ್ ರಿಲೀಸ್

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.