ಬೆಂಗಳೂರು: ಇಂದು ಎಷ್ಟೋ ನಿರ್ದೇಶಕರ ಸ್ಪೂರ್ತಿಯ ಚಿಲುಮೆ, ನಟನೆ ನಿರ್ದೇಶನಕ್ಕೆ ಪ್ರತಿನಿಧಿಸುವ ಪ್ರತಿಮೆ, ನಾಡು, ನುಡಿ, ಭಾಷೆಗಾಗಿ ಶ್ರಮಿಸಿದ ಹಿರಿಮೆ, ಆಟೋ ಚಾಲಕರಿಗೆ ಆರಾಧ್ಯ ದೈವ ನಮ್ಮ ಆಟೋರಾಜ, ಕರಾಟೆ ಕಿಂಗ್ ಶಂಕರ್ ನಾಗ್ ಅವರ 67 ನೇ ಜಯಂತಿ.
ದಿ.ಶಂಕರ್ ನಾಗ್ ರವರಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವರು ಭಕ್ತಿ ಪೂರ್ವ ನಮನಗಳನ್ನು ಸಲ್ಲಿಸಿದ್ದಾರೆ.
ನಿಜವಾದ ದಂತಕಥೆಗೆ ಎಂದಿಗೂ ಸಾವಿಲ್ಲ: ದರ್ಶನ್
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಮಾಡಿ, ನಿಜವಾದ ದಂತಕಥೆಗೆ ಎಂದಿಗೂ ಸಾವಿಲ್ಲ. ಅವರು ಯಾವಾಗಲೂ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಹ್ಯಾಪಿಬರ್ತ್ ಡೇ ಶಂಕರಣ್ಣ ಯಾವಾಗಲೂ ನಿಮ್ಮನ್ನು ಮಾಡಿಕೊಳ್ಳುತ್ತೇವೆ ಎಂದು ಶಂಕರ್ ನಾಗ್ ಅವರಿಗೆ ನಮನ ಸಲ್ಲಿಸಿದ್ದಾರೆ.
A True legend never dies. He will always remain Evergreen in Hearts of Kannadigas. #happybirthdayshankaranna will always be Missed pic.twitter.com/6eIfSr73MV
— Darshan Thoogudeepa (@dasadarshan) November 9, 2020
ತಮ್ಮನ ಪಾತ್ರ ಮಾಡಿದ ಹೆಮ್ಮೆಯಿದೆ: ಜಗ್ಗೇಶ್
ನಟ ನವರಸ ನಾಯಕ ಜಗ್ಗೇಶ್ ಅವರು, ಹಲವರು ಸತ್ತ ಮೂರು ದಿನಕ್ಕೆ ಮರೆವು..! ಕೆಲವರು ಸತ್ತ ನೂರುವರ್ಷಕ್ಕು ನೆನಪು..!ಎಲ್ಲರಿಗು ಇವರು ನಟ ನನಗೆ ಆತ್ಮೀಯ..!! ಇವರ ತಮ್ಮನ ಪಾತ್ರ ಮಾಡಿದ ಹೆಮ್ಮೆಯಿದೆ..! ಮಾಸದೆ ಮಾನಸದಲ್ಲಿ ಇವರ ಒಡನಾಟದ ನೆನಪು ಉಳಿದಿದೆ..! ಮಹನೀಯರ ಹುಟ್ಟುಹಬ್ಬದ ಶುಭಕಾಮನೆ ಎಂದು ಟ್ವೀಟ್ ಮಾಡಿದ್ದಾರೆ.
ಹಲವರು ಸತ್ತ ಮೂರು ದಿನಕ್ಕೆ ಮರೆವು..!!
ಕೆಲವರು ಸತ್ತ ನೂರುವರ್ಷಕ್ಕು ನೆನಪು..!!
ಎಲ್ಲರಿಗು ಇವರು ನಟ ನನಗೆ ಆತ್ಮೀಯ..!!
ಇವರ ತಮ್ಮನ ಪಾತ್ರ ಮಾಡಿದ ಹೆಮ್ಮೆಯಿದೆ..!!
ಮಾಸದೆ ಮಾನಸದಲ್ಲಿ ಇವರ ಒಡನಾಟದ ನೆನಪು ಉಳಿದಿದೆ..!!
ಮಹನೀಯರ ಹುಟ್ಟುಹಬ್ಬದ ಶುಭಕಾಮನೆ……… pic.twitter.com/YgWg6naUPG— ನವರಸನಾಯಕ ಜಗ್ಗೇಶ್ (@Jaggesh2) November 9, 2020