ನಟ ದರ್ಶನ ಮೇಲೆ ಚಪ್ಪಲಿ ಎಸೆತ: ಕಹಿ ಘಟನೆ ಮರೆತು ದರ್ಶನ್ ಪರ ನಿಂತ ನಟ ಜಗ್ಗೇಶ್, ಕಿಚ್ಚ ಸುದೀಪ್‌..!

ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಗೆ ಸಂಬಂಧಿಸಿದಂತೆ ನಟಿ ಪ್ರಣೀತಾ ನಟರಾದ ಜಗ್ಗೇಶ್, ಕಿಚ್ಚ ಸುದೀಪ್‌ ಸೇರಿದಂತೆ ಹಲವರು ನಟ ದರ್ಶನ್‌ ಮೇಲೆ ಶೂ ಎಸೆದಿರುವ ಬಗ್ಗೆ…

Darshan and sudeep

ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಗೆ ಸಂಬಂಧಿಸಿದಂತೆ ನಟಿ ಪ್ರಣೀತಾ ನಟರಾದ ಜಗ್ಗೇಶ್, ಕಿಚ್ಚ ಸುದೀಪ್‌ ಸೇರಿದಂತೆ ಹಲವರು ನಟ ದರ್ಶನ್‌ ಮೇಲೆ ಶೂ ಎಸೆದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ

ಗೆಳೆಯನ ಕುರಿತು ಕಿಚ್ಚ ಸುದೀಪ್ ಮೌನ ಮುರಿದ ಕಿಚ್ಚ ಸುದೀಪ್‌:

Kiccha sudeepa vijayaprabha

Vijayaprabha Mobile App free

ಇದೀಗ ಗೆಳೆಯನ ಕುರಿತು ಕಿಚ್ಚ ಸುದೀಪ್ ಮೌನ ಮುರಿದಿದ್ದು, ಆ ವಿಡಿಯೋ ನೋಡಿ ತುಂಬಾ ಬೇಸರವಾಯಿತು. ಕನ್ನಡ ಹಾಗೂ ಚಿತ್ರರಂಗಕ್ಕೆ ದರ್ಶನ್‌ ವಿಶೇಷ ಕೊಡುಗೆ ನೀಡಿದ್ದಾರೆ. ಅವರನ್ನು ಈ ರೀತಿ ನಡೆಸಿಕೊಂಡಿರುವುದು ಸರಿಯಲ್ಲ.

ವಿಷಯ ಏನೇ ಇರಲಿ ಈ ರೀತಿಯ ವರ್ತನೆ ಉತ್ತರವಲ್ಲ. ಸಾಧ್ಯವಾದರೆ ಪ್ರೀತಿ, ಗೌರವ ಹಂಚಿ ಎಂದಿದ್ದಾರೆ. ಈ ಹಿಂದೆ ಜೋಡೆತ್ತಿನಂತಿದ್ದ ದಚ್ಚು-ಕಿಚ್ಚ ಕಾರಣಾಂತರಗಳಿಂದ ಅಂತರ ಕಾಯ್ದುಕೊಂಡಿದ್ದರು.

 ದರ್ಶನ್ ಪರ ನಿಂತ ನಟ ನವರಸ ನಾಯಕ ಜಗ್ಗೇಶ್:

jaggesh

ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆಯನ್ನು ನಟ ಜಗ್ಗೇಶ್ ಖಂಡಿಸಿದ್ದು, ಈ ಕುರಿತು ಟ್ವೀಟ್ ಮಾಡಿ, ತಾವು ಕಲಾವಿದನಿಗೆ ಬೆಂಬಲವಾಗಿ ನಿಂತುಕೊಳ್ಳುವುದಾಗಿ ಹೇಳಿದ್ದಾರೆ. ತಮ್ಮೊಂದಿಗೆ ನಡೆದ ಕಹಿ ಘಟನೆ ಮರೆತು ಜಗ್ಗೇಶ್, ದರ್ಶನ್ ಗೆ ಬೆಂಬಲ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ವರ್ಷ ದರ್ಶನ್ ಅಭಿಮಾನಿಗಳು ಜಗ್ಗೇಶ್ ನಟಿಸುತ್ತಿದ್ದ ಸಿನಿಮಾದ ಶೂಟಿಂಗ್ ಸೆಟ್ ಗೆ ತೆರಳಿ ಜಗ್ಗೇಶ್ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದರು. ಅದನ್ನು ಮರೆತು ಜಗ್ಗೇಶ್ ಈಗ ದಾಸನ ನೆರವಿಗೆ ನಿಂತಿದ್ದಾರೆ.

ದರ್ಶನ್ ಬೆಂಬಲಕ್ಕೆ ನಿಂತ ನಟಿ ಪ್ರಣೀತಾ:

Pranitha vijayaprabha

ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆಗೆ ಸಂಬಂಧಿಸಿದಂತೆ ಹಲವು ನಟ ನಟಿಯರು ದರ್ಶನ್ ಗೆ ಬೆಂಬಲ ಸೂಚಿಸಿದ್ದು, ಇದೀಗ ಟ್ವೀಟ್ ಮಾಡಿರುವ ನಟಿ ಪ್ರಣೀತಾ ಸುಭಾಷ್, ‘ಒಬ್ಬ ಅಭಿಮಾನಿಯಾಗಿ ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ’ ಎಂದಿದ್ದಾರೆ.

ಅಲ್ಲದೆ ಈ ಘಟನೆಯನ್ನು ನಾನು ಖಂಡಿಸುತ್ತೇನೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ದರ್ಶನ್ ಸರ್ ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.