ಬರೋಬ್ಬರಿ200 ಕೋಟಿ ರೂಗಿಂತಲೂ ಅಧಿಕ ಹಣಕಾಸು ವರ್ಗಾವಣೆ ಸಂಬಂಧ ಸುಕೇಶ್ ಚಂದ್ರಶೇಖರ್ ಪ್ರಕರಣ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದ್ದು, ಸಣ್ಣ ನಟಿಯರು, ಮಾಡೆಲ್‌ಗಳಿಗೆ ಈತ ದುಬಾರಿ ಗಿಫ್ಟ್ ನೀಡಿರುವುದನ್ನು ಇಂಡಿಯಾ ಟುಡೆ ಬಯಲಿಗೆಳೆದಿದೆ.
ಹೌದು, ನಟಿಯರಾದ ನಿಖಿತಾ ತಾಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್, ಅರುಷಾ ಪಾಟೀಲ್ ಅವರು ಸಹವರ್ತಿ ಪಿಂಕಿ ಇರಾನಿ ಮೂಲಕ ತಿಹಾರ್ ಜೈಲಿನಲ್ಲಿ ಸುಕೇಶ್‌ನನ್ನು ಭೇಟಿಯಾಗಿದ್ದರು. ಬೇರೆ ಬೇರೆ ಹೆಸರುಗಳಿಂದ ಇವರನ್ನು ಪರಿಚಯಿಸಿದ್ದಳು. ಈ ವೇಳೆ ದುಬಾರಿ ಬ್ಯಾಗ್, ವಾಚ್, ಹಣವನ್ನು ಸುಕೇಶ್ ಈ ನಟಿಯರಿಗೆ ನೀಡಿದ್ದನು.
ಬಾಹುಬಲಿ ಸುಂದರಿಗೆ 6 ಗಂಟೆ ED ಗ್ರಿಲ್!
ಇನ್ನು, ವಂಚಕ ಸುಕೇಶ್ ನಂಟಿನ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್ ನಟಿ ನೌರಾ ಫತೇಹಿಯನ್ನು ಪೊಲೀಸರು 6 ಗಂಟೆ ವಿಚಾರಣೆಗೆ ಗುರಿಪಡಿಸಿದ್ದಾರೆ.
ಹೌದು, ಸುಕೇಶ್ ಜತೆಗಿನ ಸಂಬಂಧ, ಪಡೆದ ಉಡುಗೊರೆ, ವಿಶೇಷ ಸೌಲಭ್ಯ ಕುರಿತು ಪ್ರಶ್ನಿಸಲಾಗಿದ್ದು, ಸುಕೇಶ್, ನೌರಾ ಫತೇಹಿಗೆ ಐಶಾರಾಮಿ ಕಾರನ್ನು ಗಿಫ್ಟ್ ನೀಡಿದ್ದ ಎನ್ನಲಾಗಿದೆ. ಇದನ್ನು ನಟಿ ನೌರಾ ಫತೇಹಿ ನಿರಾಕರಿಸಿದ್ದು, ಈ ಹಿಂದೆ ಕೂಡ ED ನಟಿಯನ್ನು ವಿಚಾರಣೆಗೆ ಗುರಿಪಡಿಸಿತ್ತು. ಬಾಹುಬಲಿ ಸಿನಿಮಾದಲ್ಲಿ ನೌರಾ ಫತೇಹಿ ಮಿಂಚಿದ್ದರು.