ಮುಂಬೈ: ಬೋಲ್ಡ್ ನಟಿ ಎಂದೆ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ ಕಾಸ್ಟಿಂಗ್ ಕೌಚ್ ಯಿಂದ ತನ್ನ ವೃತ್ತಿಜೀವನದ ಮೇಲೆ ಪ್ರಭಾವ ಬೀರಿದ ಪರಿಣಾಮವನ್ನು ಬಹಿರಂಗ ಪಡಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮಲ್ಲಿಕಾ ಶೆರಾವತ್, ಎಲ್ಲಾ ಎ-ಲಿಸ್ಟರ್ ನಾಯಕರು ನನ್ನೊಂದಿಗೆ ಸಿನಿಮಾ ಮಾಡಲು ನಿರಾಕರಿಸಿದರು. ಏಕೆಂದರೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ’. ಆದ್ದರಿಂದ, ಅವರು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಮಾತ್ರ ಅವರು ಇಷ್ಟಪಡುತ್ತಾರೆ. ಆದರೆ ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ, ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ’ ಎಂದು 45 ವರ್ಷದ ನಟಿ ಮಲ್ಲಿಕಾ ಹೇಳಿದರು.
ರಾಜಿ ಮಾಡಿಕೊಳ್ಳುವುದು ಎಂದರೆ ಏನು ಅಂತ ಕೇಳಿದ ಪ್ರಶ್ನೆಗೆ ಮಲ್ಲಿಕಾ ಮಲ್ಲಿಕಾ ಶೆರಾವತ್, ‘ಯಾವ ಹೀರೋಯಿನ್ ತಮ್ಮ ಜೊತೆ ರಾಜಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅಂಥವರನ್ನು ನಾಯಕ ನಟರು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ. ‘ನಾನು ಅಂಥವಳಲ್ಲ; ಒಬ್ಬ ನಟ ನಿಮಗೆ ಫೋನ್ ಮಾಡಿ ಮಧ್ಯರಾತ್ರಿ ಬರಲು ಹೇಳುತ್ತಾನೆ. ಹೋಗದಿದ್ದರೆ ಅವರ ಚಿತ್ರದಿಂದ ನಿಮ್ಮನ್ನು ಕೈಬಿಡುತ್ತಾರೆ’. ನಾನು ಅಂಥವಳಲ್ಲ. ನಾನು ಇನ್ನೊಬ್ಬರ ಲೈಂಗಿಕಾಸಕ್ತಿಯ ವಿಷಯವಾಗಲು ಬಯಸುವುದಿಲ್ಲ’ ಎಂದು ಮಲ್ಲಿಕಾ ಶೆರಾವತ್ ಹೇಳಿರುವುದು ಸೆನ್ಸೇಷನ್ ಸೃಷ್ಟಿ ಮಾಡಿದೆ.