ತೆಲುಗಿನ ಖ್ಯಾತ ನಿರೂಪಕಿ, ನಟಿ ರಶ್ಮಿ ಗೌತಮ್ ತೆಲುಗು ಕಿರುತೆರೆಯ ನಂಬರ್ 1 ನಿರೂಪಕಿಯಾಗಿದ್ದು, ದೇಶದಲ್ಲಿ ಹೆಚ್ಚು ಟಿಆರ್ ಪಿ ಹೊಂದಿರುವ ಖಾಸಗಿ ವಾಹಿನಿಯ ಹಾಸ್ಯ ಕಾರ್ಯಕ್ರಮ ‘ಜಬರ್ದಸ್ತ್’ ಮೂಲಕ ತೆಲುಗು ನಾಡಿನ ಮನೆ ಮಾತಾಗಿದ್ದಾರೆ.
ಅಂತಹ ರಶ್ಮಿ ಗೌತಮ್ ಅವರ ವೈಯುಕ್ತಿಕ ಜೀವನದ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿದ್ದು, ರಶ್ಮಿ ಅವರಿಗೆ ಗುಟ್ಟಾಗಿ ಮದುವೆ ಆಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇನ್ನೂ ಕೆಲವರು ಮದುವೆ ಆಗಿ ಡಿವೋರ್ಸ್ ಕೂಡ ಆಗಿದೆ ಎನ್ನುತ್ತಿದ್ದಾರೆ.
ನಿರೂಪಕಿ ರಶ್ಮಿ ಗೌತಮ್ ಅವರು ಕರೋನ ಲಾಕ್ ಡೌನ್ ಅವಧಿಯಲ್ಲಿ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಕೈ ಹಿಡಿದಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಈ ವಿಚಾರ ನಿಜಾನೋ ಸುಳ್ಳೋ ಗೊತ್ತಿಲ್ಲ, ಆದರೆ ಎಲ್ಲದಕ್ಕೂ ಅವರೇ ಬಂದು ಸ್ಪಷ್ಟನೆ ಕೊಡಬೇಕು.