ಇತ್ತೀಚಿಗೆ ಮೀಟು ಅಭಿಯಾನದ ಪ್ರಭಾವ ಸೈಲೆಂಟ್ ಆಗಿದ್ದು, ಕೆಲವು ನಟ-ನಟಿಯರು ಮಾತ್ರ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಯಾವುದೇ ಸಂದರ್ಶನದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗಷ್ಟೇ ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಠಿ ತಮಗಾದ ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ,” ಒಂದು ಧಾರಾವಾಹಿ ಅಥವಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ನಿಜವಾದ ಸಮಸ್ಯೆಗಳು ಉದ್ಭವಿಸುತ್ತವೆ. ಕೈ ಒಂದು ರೂಪಾಯಿ ಕೂಡ ಇಲ್ಲ. ಪಾವತಿಸಲು ಇಎಂಐಗಳಿವೆ. ಅಂತಹ ಸಮಯದಲ್ಲಿ ಒಂದು ಆಫರ್ ಬಂತು. ರಾತ್ರಿಯಿಡೀ ನಿರ್ದೇಶಕರ ಜೊತೆ ಇದ್ದರೆ ಅವಕಾಶ ಕೊಡುತ್ತಾರೆ ಎಂದು ಹೇಳಿದರು. ನನ್ನೇ ಯಾಕೆ ಎಂದು ಕೇಳಿದರೆ.. ನೀನು ಜಾಣೆ ಎಂದು ಹೇಳಿದರು. ಇಂಡಸ್ಟ್ರಿಯಲ್ಲಿ ಇಂಥವರು ಸಾಕಷ್ಟು ಮಂದಿ ಇದ್ದಾರೆ. ಇಂಡಸ್ಟ್ರಿಯಲ್ಲಿ ಇದೆಲ್ಲ ಸಾಮಾನ್ಯ ಎಂದು ನಂಬಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
ಒಂದು ವೇಳೆ ಅವರ ಆಮಿಷಕ್ಕೆ ಒಪ್ಪದಿದ್ದರೆ ನಿಮ್ಮ ಕೆರಿಯರ್ ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ, ಅವರ ಆಫರ್‌ಗಳನ್ನು ಸ್ವೀಕರಿಸದಿದ್ದರೂ ಯಾವುದೇ ನಷ್ಟವಾಗುವುದಿಲ್ಲ. ನಮ್ಮ ಪ್ರತಿಭೆಯ ಮೇಲೆ ನಂಬಿಕೆಯಿಟ್ಟರೆ ಮಾತ್ರ ಅವಕಾಶಗಳು ಬರುತ್ತವೆ’ ಎನ್ನುತ್ತಾರೆ ನಟಿ ದಿವ್ಯಾಂಕ.
ನಟಿ ದಿವ್ಯಾಂಕ ತ್ರಿಪಾಠಿ ಅವರು ಹಿಂದಿಯ ‘ಬಾನು ಮೈ ತೇರಿ ದುಲ್ಹಾನ್, ಯೇ ಹೈ ಮೊಹಬ್ಬತೇನ್’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಖತ್ರೋಂಕಿ ಖಿಲಾಡಿಯಲ್ಲಿ ರನ್ನರ್ ಅಪ್ ಕೂಡ ಆಗಿದ್ದಾರೆ.