ಬೆಂಗಳೂರು : ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಸರ್ಜಾ ಅವರು ಇನ್ನೇನು ಕೆಲವೇ ದಿನಗಳಲ್ಲಿ ಜೂನಿಯರ್ ಚಿರುಗೆ ಜನ್ಮವನ್ನು ನೀಡಲಿದ್ದಾರೆ. ಇದೀಗ ಸರ್ಜಾ ಕುಟುಂಬದಿಂದ ಮತ್ತೊಂದು ಸರ್ಪ್ರೈಜ್ ಸಿಕ್ಕಿದ್ದು, ನಟ ದ್ರುವ ಸರ್ಜಾ ವಿಡಿಯೋ ಮೂಲಕ ಜೂನಿಯರ್ ಚಿರು ಆಗಮನದ ಕುರಿತು ತಿಳಿಸಿದ್ದಾರೆ. ಸ್ವಾಗತಕ್ಕಾಗಿ ವಿಡಿಯೋವನ್ನು ಸಹ ಮಾಡಿದ್ದಾರೆ ಎನ್ನಲಾಗಿದೆ.
ಇಡೀ ಕುಟುಂಬ ಮತ್ತು ಸ್ನೇಹಿತರು ಹಾಜರಿದ್ದ ಪ್ರತಿಯೊಬ್ಬರಿಂದ ವಿಶೇಷ ‘ಹಾರ್ಟ್ಲಿ ವೆಲ್ಕಮ್ ಡಿಯರ್ ಚಿರು’ ನೊಂದಿಗೆ ಪ್ರಾರಂಭವಾಗುವ ವೀಡಿಯೊವನ್ನು ನಟ ದ್ರುವ ಸರ್ಜಾ ತಮ್ಮಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಚಿರು ಮತ್ತು ಮೇಘನಾ ಅವರ ವಿವಾಹ ಹಾಗು ಜೂನಿಯರ್ ಚಿರುವಿನ ಮೂಲಕ ಚಿರು ಸ್ವಾಗತದ ಮರು-ಸೃಷ್ಟಿಯಾಗಿದೆ ಎನ್ನಲಾಗಿದೆ.
ಈ ವಿಡಿಯೋದಲ್ಲಿ ನಟ ಅರ್ಜುನ್ ಸರ್ಜಾ ಅವರು “ನಾನು ಒಂದೇ ಒಂದು ವಿಷಯವನ್ನು ನಂಬುತ್ತೇನೆ, ಅದು ನನಗೆ ಒಂದು ಮಂತ್ರವಾಗಿದೆ. ನಾವು ಜೀವನದಲ್ಲಿ ಮುಂದುವರಿಯಬೇಕಾಗಿದ್ದು, ವಿಷಯಗಳನ್ನು ಮರೆತುಬಿಡುವ ಬದಲು, ನಾವು ಹೆಚ್ಚು ಬಲಶಾಲಿಯಾಗಿರಲು ಪ್ರಯತ್ನಿಸಿಬೇಕು. ನಾವು ನಿಮಗಾಗಿ ಮತ್ತು ಮಗುವಿಗೆ ಶಕ್ತಿಯಾಗಿ ಇರುತ್ತೇವೆ ಎಂದು ಮೇಘಾನಾಗೆ ಹೇಳಲು ನಾನು ಬಯಸುತ್ತೇನೆ ಎಂದು ಹೇಳಿದರು.
ಮೇಘಾನಾಗೆ ಬಂದು ಕೇಕ್ ಕತ್ತರಿಸುವಂತೆ ಹೇಳಿದ ಅರ್ಜುನ್ ಸರ್ಜಾ ಹುಟ್ಟುಹಬ್ಬದ ಶುಭಾಶಯಗಳ ಹಾಡಿನ ಮೂಲಕ ಎಲ್ಲರಿಗೂ ‘ಹಾರ್ಟಿ ವೆಲ್ಕಮ್ ಟು ಯು, ಜೂನಿಯರ್ ಚಿರು’ ಹಾಡಲು ಹೇಳಿ ತಾಯಿ ಮತ್ತು ಮಗುವನ್ನು ಆಶೀರ್ವದಿಸುವಂತೆ ಎಲ್ಲರಿಗೂ ಕೇಳಿಕೊಂಡರು.
ಇದನ್ನು ಓದಿ: ಚಿರು ಕಟೌಟ್ ಪಕ್ಕದಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ