ಸ್ಯಾಂಡಲ್ವುಡ್ ನಲ್ಲಿ ಹಾಟ್ ಆಗಿರುವ ಸುದ್ದಿಯೊಂದು ಹೊರಬಿದ್ದಿದ್ದು, ಸದ್ಯದಲ್ಲೇ ಕನ್ನಡದ ಸೇಸಮ್ಮ ಖ್ಯಾತಿಯ ನಟಿ ಸನ್ನಿ ಲಿಯೋನ್ ಮತ್ತೆ ಕನ್ನಡಕ್ಕೆ ಬರುತ್ತಿದ್ದಾಳಂತೆ.
ಹೌದು,ಕನ್ನಡದ ಕಾಟನ್ ಪೇಟೆ ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಲು ನಟಿ ಸನ್ನಿ ಲಿಯೋನ್ ಸಮ್ಮತಿಸಿದ್ದು, ಅದಕ್ಕಾಗಿ 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು, ಜುಲೈ 29 ರಿಂದ ಹೈದರಾಬಾದ್ನಲ್ಲಿ ‘ಕಾಟನ್ ಪೇಟೆ’ ಸಿನಿಮಾ ಐಟಂ ಹಾಡು ಶೂಟಿಂಗ್ ಮಾಡುವ ಯೋಜನೆಯಿದೆ.
ಇನ್ನು, ಕನ್ನಡದ ಕಾಟನ್ ಪೇಟೆ ಸಿನಿಮಾವನ್ನು ತೆಲುಗಿನಲ್ಲಿ ‘ಸೀತಣ್ಣ ಪೇಟೆ ಗೇಟ್’ ಎಂಬ ಹೆಸರಿನಲ್ಲಿ ತಯಾರಾಗುತ್ತಿದ್ದು, ಕನಕಪುರ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ವಿ ರಾಜ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.