ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟಿ ಅತಿಯಾ ಶೆಟ್ಟಿ ಅವರು ಬಹಳ ದಿನಗಳಿಂದ ಪ್ರೀತಿಸುತ್ತಿರುವುದು ತಿಳಿದ ವಿಷಯ. ಅತಿಯಾ ಅವರ ತಂದೆ ಬಾಲಿವುಡ್ ಸ್ಟಾರ್ ಹೀರೋ ಸುನಿಲ್ ಶೆಟ್ಟಿ ಇತ್ತೀಚಿನ ಮದುವೆಗೆ ಒಪ್ಪಿಕೊಂಡಿದ್ದಾರೆಂದು ತೋರುತ್ತಿದೆ. ಅದಕ್ಕೆ ಅವರು ಮಾಡಿದ ಕಾಮೆಂಟ್ ಸಾಕ್ಷಿ ಎಂದು ನೆಟಿಜನ್‌ಗಳು ಹೇಳಿತ್ತಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆತಿಯಾ ಶೆಟ್ಟಿ ನಡುವಿನ ಪ್ರೇಮ ಸಂಬಂಧ ಎಲ್ಲರಿಗು ತಿಳಿದ ವಿಷಯ. ಇವರಿಬ್ಬರು ಬಹಳ ದಿನಗಳಿಂದ ಪ್ರೀತಿಸುತ್ತಿದ್ದು, ಅನೇಕ ಸಂದರ್ಭಗಳಲ್ಲಿ, ಇವರು ಪಾರ್ಟಿಗಳಿಗೆ ಮತ್ತು ಲಂಚ್ ಒಟ್ಟಿಗೆ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಆದರೆ ಆರಂಭದಲ್ಲಿ ಈ ವಿಷಯದ ಪ್ರಶ್ನಿಸಿದರೆ ಪ್ರತಿಕ್ರಿಯಿದ, ಅನಂತರ ಓಪನ್ ಆಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರ ಬಗ್ಗೆ ಒಬ್ಬರು ಪರಸ್ಪರರ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಪ್ರೀತಿಯ ಚಿಹ್ನೆಗಳೊಂದಿಗೆ ಒಬ್ಬರಿಗೊಬ್ಬರು ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ.
ಆದರೆ ಈಗ ಆತಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಅವರು ಮದುವೆಗೆ ಸರಿ ಎಂದು ಹೇಳಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹಿಂದೆ ಸುನಿಲ್ ಶೆಟ್ಟಿ ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಸುನಿಲ್ ಶೆಟ್ಟಿ ಇವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡರು ಎಂದು ನೆಟಿಜನ್‌ಗಳು ಬಲವಾಗಿ ನಂಬಿದ್ದಾರೆ. ಇದಕ್ಕೆ ಕಾರಣ, ಕೆ.ಎಲ್.ರಾಹುಲ್ ಅವರ 29 ನೇ ಹುಟ್ಟುಹಬ್ಬವನ್ನು ಭಾನುವಾರ ಆಚರಿಸಲಾಯಿತು. ಕೆ.ಎಲ್.ರಾಹುಲ್ ಅವರು ಈ ಹುಟ್ಟುಹಬ್ಬವನ್ನು ಆತಿಯಾ ಶೆಟ್ಟಿ ಅವರೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಒಟ್ಟಿಗೆ ತೆಗೆಸಿಕೊಂಡ ಫೋಟೋಗಳನ್ನು ಆತಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಶುಭಾಷಯ ತಿಳಿಸಿ ಕಾಮೆಂಟ್ ಮಾಡಿದ್ದಾರೆ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ಆದರೆ, ಸುನಿಲ್ ಶೆಟ್ಟಿ ಕೂಡ ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. “ಟ್ರೂಲಿ (truly),” ಎಂದು ಕಾಮೆಂಟ್ ಮಾಡಿ, ಇದರ ಜೊತೆಗೆ ಒಂದು ಹೃದಯ ಚಿಹ್ನೆಯನ್ನೂ (heart symble) ಹಾಕಿದ್ದಾರೆ. ಇದರೊಂದಿಗೆ ಸುನಿಲ್ ಶೆಟ್ಟಿ ಅವರು ಕೆ.ಎಲ್.ರಾಹುಲ್ ಮತ್ತು ಆತಿಯಾ ಶೆಟ್ಟಿ ಮದುವೆಗೆ ಒಪ್ಪಿಕೊಂಡಂತೆ ಎಂದು ನೆಟಿಜನ್‌ಗಳು ಬಲವಾಗಿ ನಂಬಿದ್ದಾರೆ.
View this post on Instagram