Bagheera Trailer : ಸ್ಯಾಂಡಲ್ ವುಡ್ ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ (SriiMurali) ಅಭಿಯನದ, ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಹೆಣೆದ ‘ಬಘೀರ'(Bagheera) ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾ ಅಕ್ಟೋಬರ್ 31ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಹೌದು, ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದ್ದು, ಹಲವಾರು ಫ್ಯಾನ್ಸ್ ಇದನ್ನು ಕನ್ನಡದ ‘ಬ್ಯಾಟ್‌ಮ್ಯಾನ್’ ಎಂದು ಬಣ್ಣಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಹಾಗೂ ಮಾಸ್ಕ್ ಧರಿಸಿ ಶತ್ರುಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಮುರಳಿ ಟ್ರೇಲರ್‌ನಲ್ಲಿ ಕಾಣಿಸಿದ್ದಾರೆ. ಇನ್ನು, ಶ್ರೀಮುರಳಿ ಅವರದ್ದು ಎರಡು ಶೇಡ್ನ ಪಾತ್ರ ಅನ್ನೋದು ಟ್ರೇಲರ್‌ನಲ್ಲಿ ಗೊತ್ತಾಗಿದ್ದು, ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಟ್ರೇಲರ್ ನೋಡಿದವರಿಗೆ ಸ್ಪಷ್ಟವಾಗಿದೆ.
ಇದನ್ನೂ ಓದಿ: ಯಕ್ಷಗಾನದ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ
ಕನ್ನಡದ ಜತೆಗೆ ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆಯಾಗಲಿದ್ದು, ಇದರ ಕಥೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಬರೆದಿದ್ದಾರೆ. ರುಕ್ಮಿಣಿ ವಸಂತ್, ಪ್ರಕಾಶ್ ರಾಜ್,ಸುಧಾರಾಣಿ, ರಂಗಾಯಣ ರಘು ಈ ಚಿತ್ರದಲ್ಲಿದ್ದಾರೆ. ಲಕ್ಕಿ, ಕ್ವಾಟ್ಲೇ ಸತೀಶ್ ಸಿನಿಮಾಗಳ ನಿರ್ದೇಶಕ ಡಾ. ಸೂರಿ, ಹೊಂಬಾಳೆ ಫಿಲಂಸ್ (HombaleFilms) ನಿರ್ಮಾಣದ ಕೆಜಿಎಫ್-1, ಕೆಜಿಎಫ್-2 ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. 2014ರ ನಂತರ ʼಭಘೀರʼ ಮೂಲಕ ನಿರ್ದೇಶಕರಾಗಿ ಮರುಪ್ರವೇಶ ಮಾಡಿದ್ದಾರೆ. ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದೆ.