ಚೆನ್ನೈ: ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ ‘ಸೂರರೈ ಪೋಟ್ರು’ ಸಿನಿಮಾವು ಆಸ್ಕರ್ ನಾಮಿನೇಶನ್‌ಗೆ ಆಯ್ಕೆಯಾಗಿತ್ತು. ಇದೀಗ 366 ಸಿನಿಮಾಗಳ ಪೈಕಿ ಸೂರರೈ ಪೊಟ್ರು ಸಿನಿಮಾ ಕೂಡ ಆಸ್ಕರ್ ಅರ್ಹತಾ ಹಂತಕ್ಕೆ ಆಯ್ಕೆಯಾಗಿದೆ.
ನಿರ್ದೇಶಕ ರಾಜ್‌ಸೇಕರ್ ಪಾಂಡಿಯನ್ ಈ ವಿಷಯವನ್ನು ದೃಢಪಡಿಸಿದದ್ದು, ಕನ್ನಡಿಗ ಜಿ.ಆರ್ ಗೋಪಿನಾಥ್ ಅವರ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ತಯಾರಾಗಿತ್ತು. ಗೋಪಿನಾಥ್ ಅವರ ‘ಸಿಂಪ್ಲಿ ಫೈ’ ಕೃತಿ ಆಧರಿಸಿದ ಸಿನಿಮಾ ಇದಾಗಿದ್ದು, ಇದರಲ್ಲಿ ತಮಿಳು ಸ್ಟಾರ್ ನಟ ಸೂರ್ಯಗೆ ನಾಯಕಿಯಾಗಿ ಅಪರ್ಣಾ ಬಾಲಮುರಳಿ ನಟಿಸಿದ್ದಾರೆ.
ಇನ್ನು ಸೂರರೈ ಪೊಟ್ರು ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದೂ, ಸೂರ್ಯ, ಗುಣೀತ್ ಮೊಂಗಾ ಅವರು ನಿರ್ಮಾಣ ಮಾಡಿದ್ದೂ ಜಿ.ವಿ.ಪ್ರಕಾಶ್ ಕುಮಾರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಸಿನಿಮಾದಲ್ಲಿ ನಟ ಸೂರ್ಯ, ಅಪರ್ಣಾ ಬಾಲಮುರಳಿ, ಪರೇಶ್ ರಾವಲ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.