ದೇಶದ ಪ್ರಸಿದ್ಧ ಜ್ಯೋತಿಷಿ ಎಂದು ಕರೆಸಿಕೊಳ್ಳುವ ತೆಲುಗು ಜ್ಯೋತಿಷಿ ವೇಣು ಸ್ವಾಮಿ ಅವರು, ಕಾಂಗ್ರೆಸ್‌ನಿಂದ ನಟಿ ರಶ್ಮಿಕಾ ಮಂದಣ್ಣ ಸ್ಪರ್ಧಿಸಿ,ಸಂಸದರಾಗಲಿದ್ದಾರೆ ಎಂದು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಿನಿಮಾಗಳ ಏಳಿಗೆ ಜೊತೆಗೆ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಸಂಸದರಾಗಿ ಗೆಲ್ಲುತ್ತಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ನನ್ನ ಸಲಹೆಯ ಮೇರೆಗೆ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಇಬ್ಬರೂ ಬೇರೆಯಾದರು ಮತ್ತು ಆಯಾ ವೃತ್ತಿಜೀವನದಲ್ಲಿ ಯಶಸ್ವಿಯಾದರು ಎಂದು ಹೇಳಿ ವೇಣು ಸ್ವಾಮಿ ಸಂಚಲನ ಮೂಡಿಸಿದ್ದಾರೆ.
ಇನ್ನು, ಕೇವಲ ರಶ್ಮಿಕಾ ಮಾತ್ರವಲ್ಲದೆ ಇತರ ನಟ-ನಟಿಯರ ಭವಿಷ್ಯ ಹೇಳುವ ವೇಣು ಸ್ವಾಮಿ, ತೆಲುಗಿನ ಪವರ್ ಸ್ಟಾರ್, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್‌ಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ. ಅವರು ಶೀಘ್ರದಲ್ಲೇ ನಾಲ್ಕನೇ ಮದುವೆ ಮಾಡಿಕೊಳ್ಳುತ್ತಾರೆ ಎಂದು ಭವಿಷ್ಯ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ತೆಲುಗು ಜ್ಯೋತಿಷಿ ವೇಣುಸ್ವಾಮಿ, ಖ್ಯಾತ ನಟಿ ಸಮಂತಾ ವಿಚ್ಛೇದನ ಮತ್ತು ನಯನತಾರಾ ವಿವಾಹದ ಕುರಿತಂತೆ ಹೇಳಿಕೆ ನೀಡಿದ್ದರು