ಸೋಶಿಯಲ್ ಮೀಡಿಯಾ ಮೂಲಕ ಸ್ಟಾರ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಅವರು ಕನ್ನಡದ ಬಿಗ್ಬಾಸ್ ಒಟಿಟಿ ಮನೆ ಸೇರಿ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದ್ದು, ಇದೀಗ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಹವಾ ಸೃಷ್ಟಿಸುತ್ತಿದ್ದಾರೆ.
ಆದರೆ, ಸೋನು ಶ್ರೀನಿವಾಸ್ ಗೌಡ ಅವರನ್ನು ಈ ವಾರದ ‘ಕಳಪೆ ಸ್ಪರ್ಧಿ’ ಎಂದು ಉಳಿದೆಲ್ಲ ಸ್ಪರ್ಧಿಗಳು ಆಯ್ಕೆ ಮಾಡಿದ್ದು, ಇದರಿಂದ ಅಲ್ಲಿನ ಸೆಲ್ ಸೇರಿರುವ ಸೋನು, ಗಳಗಳನೆ ಅತ್ತಿದ್ದಾರೆ.
ಹೌದು, ಸೋನುಗೆ ಆಪ್ತವಾಗಿದ್ದ ರಾಕೇಶ್ ಅಡಿಗ ಕೂಡ ಕಳಪೆ ಎಂದಿದ್ದು, ಇದರಿಂದ ಬೇಸರಗೊಂಡಿರುವ ಸೋನು ಗೌಡ ನಾವೇನು ಇಲ್ಲಿ ಮನೆ ಕೆಲಸ ಮಾಡೋಕೆ ಬಂದಿದ್ದೀವಾ. ‘ಜೊತೆಯಲ್ಲಿದ್ದವರೇ ನನಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಇಲ್ಲಿರುವ ಎಲ್ಲರೂ ಫೇಕ್, ನಿಮಗೆಲ್ಲ ಅಸಹ್ಯವಾಗಬೇಕು, ಥೂ..’ ಎಂದು ನಿಂದಿಸಿದ್ದಾರೆ.