Shikhar Dhawan Huma Qureshi wedding photos : ಶಿಖರ್ ಧವನ್ ಮತ್ತು ಹುಮಾ ಖುರೇಷಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವೈರಲ್ ಫೋಟೋಗಳ ಹಿಂದಿನ ಸತ್ಯವನ್ನು ತಿಳಿಯಲು ನೆಟಿಜನ್‌ಗಳು ಕಾತರರಾಗಿದ್ದು, ಶಿಖರ್ ಮತ್ತು ಹುಮಾ ಸಂಬಂಧದ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ..
ಹೌದು, ಕ್ರಿಕೆಟಿಗ ಶಿಖರ್ ಧವನ್ ಮತ್ತು ನಟಿ ಹುಮಾ ಖುರೇಷಿ ಮದುವೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಅಷ್ಟೇ ಅಲ್ಲ ಇವರಿಬ್ಬರ ಮದುವೆ ಫೋಟೋಗಳು ಕೂಡ ವೈರಲ್ ಆಗಿವೆ. ಈ ವೈರಲ್ ಫೋಟೋಗಳಲ್ಲಿ, ಶಿಖರ್ ಮತ್ತು ಹುಮಾ ಮದುವೆಯಾಗಿದ್ದು, ಶಿಖರ್ ಮತ್ತು ಹುಮಾ ಖುರೇಷಿ ವಧು-ವರರ ಉಡುಪಿನಲ್ಲಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಮದುವೆ ಫೋಟೋ ನೋಡಿ ನೆಟ್ಟಿಗರ ಮನದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಶಿಖರ್ ಮತ್ತು ಹುಮಾ ಯಾವಾಗ ಒಟ್ಟಿಗೆ ಸೇರಿದರು ಎಂದು ಅಭಿಮಾನಿಗಳು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: Kannada movies of 2025 | ನಟ ಯಶ್, ಸುದೀಪ್ ಸೇರಿದಂತೆ ಸ್ಟಾರ್ ನಟರ 2025 ರ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳು
Shikhar Dhawan Huma Qureshi ವೈರಲ್ ಫೋಟೋಗಳ ಅಸಲಿ ಸತ್ಯವೇನು..?
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳು ಶಿಖರ್ ಮತ್ತು ಹುಮಾ ನಡುವಿನ ನಿಕಟತೆಯನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು, ಇದು ಯಾವಾಗ ನಡೆಯಿತು ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಆದರೆ ಈ ಫೋಟೋಗಳ ಹಿಂದಿನ ಸತ್ಯ ಸ್ವಲ್ಪ ವಿಭಿನ್ನವಾಗಿದೆ. ಹೌದು, ಶಿಖರ್ ಧವನ್ ಮತ್ತು ಹುಮಾ ಖುರೇಷಿ ಅವರ ಈ ಫೋಟೋಗಳು ಸಂಪೂರ್ಣವಾಗಿ ನಕಲಿಯಾಗಿದ್ದು, ಇಬ್ಬರ ಫೋಟೋಗಳನ್ನು AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮೂಲಕ ಎಡಿಟ್ ಮಾಡಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಕ್ರಿಕೆಟಿಗ ಮಹಮ್ಮದ್ ಶಮಿ ಮತ್ತು ಟೆನಿಸ್ ದಿಗ್ಗಜೆ ಸಾನಿಯಾ ಮಿರ್ಜಾರ ಡೇಟಿಂಗ್ ಫೋಟೋಗಳು ಸಾಕಷ್ಟು ಸುದ್ದಿ ಮಾಡಿದ್ದವು. ಈಗ ಶಿಖರ್-ಹುಮಾ ಅವರ ಫೋಟೋಗಳಿಂದ ಇಂದಿನ AI ಯುಗದಲ್ಲಿ, ಏನು ಬೇಕಾದರೂ ಸಾಧ್ಯ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ: 50 ದಿನ ಪೂರೈಸಿದ ‘ಭೈರತಿ ರಣಗಲ್’