ಮುಂಬೈ: ನಮ್ಮ ದೇಶದಲ್ಲಿ ನಟ, ನಟಿಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಸಾಮಾನ್ಯ ಜನರು ಕೂಡ ಬೇರೆ ಧರ್ಮದವರನ್ನು ವಿವಾಹವಾಗಿದ್ದಾರೆ.
ಈ ವಿಚಾರದ ಬಗ್ಗೆ ‘ಕಾಫಿ ವಿಥ್ ಕರಣ್’ ಶೋನಲ್ಲಿ ಮಾತನಾಡಿರುವ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಮುಸ್ಲಿಂ ಕುಟುಂಬಕ್ಕೆ ಸೊಸೆಯಾಗಿ ಹೋಗಿರುವುದಕ್ಕೆ ಪದೇ ಪದೇ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಿದ್ದು, ನನ್ನ ಮತ್ತು ಶಾರುಖ್ ನಡುವೆ ಸಮತೋಲನವಿದೆ. ನಾನು ಶಾರುಖ್ ಧರ್ಮವನ್ನು ಗೌರವಿಸುತ್ತೇನೆ ಎಂದಮಾತ್ರಕ್ಕೆ ಮತಾಂತರ ಆಗುತ್ತೇನೆ ಎಂದು ಅರ್ಥವಲ್ಲ. ನನಗೆ ಅದರಲ್ಲಿ ನಂಬಿಕೆಯೂ ಇಲ್ಲ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರವರ ಧರ್ಮವನ್ನು ಪಾಲಿಸಬೇಕು, ಆದರೆ ಅಲ್ಲಿ ಯಾವುದೇ ತರಹದ ಅಗೌರವ ಭಾವನೆ ಇರಲೇಬಾರದು. ಹಾಗೆಯೇ ಶಾರುಖ್ ಖಾನ್ ಕೂಡ ನನ್ನ ಧರ್ಮವನ್ನು ಎಂದೂ ಅಗೌರವದಿಂದ ಕಂಡಿಲ್ಲ ಎಂದು ಗೌರಿ ಹೇಳಿದ್ದಾರೆ.
ಕನ್ನಡದ ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಫಾ, ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್, ಶಾರುಖ್ ಖಾನ್ ಮತ್ತು ಗೌರಿ ಖಾನ್, ವೃತಿಕ್ ರೋಷನ್ ಮತ್ತು ಸುಸೇನ್ ಖಾನ್, ಅಮಿರ್ ಖಾನ್ ಮತ್ತು ಕಿರಣ್ ಸೇರಿದಂತೆ ಹಲವಾರು ವ್ಯಕ್ತಿಗಳು ಅಂತರ್ ಧರ್ಮಿಯ ಮದುವೆಯಾದವರನ್ನು ಕಾಣಬಹುದು.




