S Bali passes away : ಜೀ ಕನ್ನಡ ವಾಹಿನಿಯಲ್ಲಿ ‘ಸರಿಗಮಪ’ ಕಾರ್ಯಕ್ರಮದ ಜ್ಯೂರಿಯಾಗಿದ್ದ ಎಸ್. ಬಾಲಿ ಗುರುವಾರ ವಿಧಿವಶರಾಗಿದ್ದಾರೆ.
ಹೌದು, ಖ್ಯಾತ ವಾದ್ಯಗಾರರು, ಸಂಗೀತ ನಿರ್ದೇಶಕರು, ಸರಿಗಮಪ ಜ್ಯೂರಿಯಾಗಿದ್ದ ಶ್ರೀ ಎಸ್.ಬಾಲಸುಬ್ರಹ್ಮಣ್ಯಂ ತಮ್ಮ 71ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದು, ಅವರ ನಿಧನದಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ.
ಇನ್ನು, ಎಸ್. ಬಾಲಿ ಅವರು ಸಂಗೀತ ಸೇವೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಅವರ ಪಾಲಾಗಿತ್ತು.
ಎಸ್. ಬಾಲಿ ಅಗಲಿಕೆಗೆ ಅನುಶ್ರೀ, ಕೆಎಫ್ಎಂಎ ಸಂತಾಪ
ಜನಪ್ರಿಯ ಮೃದಂಗ ವಾದಕ ಎಸ್. ಬಾಲಿ ನಿಧನರಾಗಿದ್ದಾರೆ. ಬಾಲಿ ಅವರ ಅಗಲಿಕೆಗೆ ಹಲವರು ಕಂಬನಿ ಮಿಡಿದಿದ್ದು, ಅವರ ನಿಧನಕ್ಕೆ ನಿರೂಪಕಿ ಅನುಶ್ರೀ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಬಾಲಿ ಅವರು ನನ್ನಂತಹ ನೂರಾರು ಕಲಾವಿದರನ್ನು ಸಾಕಿ ಬೆಳಸಿದವರು. ಕಲೆಯನ್ನೇ ಅವರು ಉಸಿರಾಗಿ ಇಟ್ಟುಕೊಂಡಿದ್ದವರು. ಅವರ ಸಾವು ನನಗೆ ಬಹಳ ದುಃಖ ತಂದಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ’ ಎಂದು ‘ಕರ್ನಾಟಕ ಫಿಲ್ಮ್ ಮ್ಯುಸಿಷಿಯನ್ ಅಸೋಸಿಯೇಷನ್’ ಅಧ್ಯಕ್ಷರಾದ ಸಂಗೀತ ನಿರ್ದೇಶಕ, ನಟ, ಗಾಯಕ ಸಾಧು ಕೋಕಿಲ ಸಂತಾಪ ಸೂಚಿಸಿದ್ದಾರೆ.