ಬೆಂಗಳೂರು: ಸ್ಯಾಂಡಲ್ ವುಡ್ ಬ್ಯುಟಿ, ಕಿರಿಕ್ ಪಾರ್ಟಿ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ಮಾಡುವ ಮೂಲಕ ಅಗ್ರಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಕನ್ನಡಲ್ಲಿ ಕಿರಿಕ್ ಪಾರ್ಟಿ, ಅಂಜನಿ ಪುತ್ರ, ಚಮಕ್, ಯಜಮಾನ ಸೇರಿದಂತೆ ತೆಲುಗಿನಲ್ಲಿ ಚಲೋ, ಗೀತಾ ಗೋವಿಂದಂ, ಸರಿಲೆರು ನಿಕೇವ್ವರು, ದೇವದಾಸು, ಭೀಷ್ಮ ಸಿನಿಮಾಗಳಂತಹ ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾ ಕನ್ನಡದ ಬಹು ನಿರೀಕ್ಷಿತ ದ್ರುವ ಸರ್ಜಾ ಅಭಿನಯದ ಪೋಗುರು, ತೆಲುಗಿನ ಅಲ್ಲೂ ಅರ್ಜುನ್ ಅಭಿನಯದ ಪುಷ್ಪಾ ಹಾಗು ಬಾಲಿವುಡ್ ನಲ್ಲಿ ‘ಮಿಷನ್ ಮಜ್ನು’ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸುತ್ತಿದ್ದಾರೆ
ತನ್ನ ಸೌಂದರ್ಯದ ಮೂಲಕ ಯುವಕರ ಹೃದಯವನ್ನು ಕದ್ದ ರಶ್ಮಿಕಾಗೆ ಇತ್ತೀಚಿಗೆ ಗೂಗಲ್ ಮರೆಯಲಾಗದ ಗೌರವ ನೀಡಿದೆ. ರಶ್ಮಿಕಾ ಅವರನ್ನು 2020 ರ ವರ್ಷಕ್ಕೆ ‘ನ್ಯಾಷನಲ್ ಕ್ರಷ್ ಆಫ್ ಇಂಡಿಯಾ’ ಎಂದು ಗೂಗಲ್ ಆಯ್ಕೆ ಮಾಡಿದೆ. ಆದರೆ ಅವರು ಕನ್ನಡ & ತೆಲುಗು ಸಿನಿಮಾ ಬಿಟ್ಟರೆ ಯಾವ ಭಾಷೆಗಳಲ್ಲೂ ನೆರೆವಾಗಿ ಸಿನಿಮಾ ಮಾಡಿಲ್ಲ. ಆದರೆ ಅವರು ನಟಿಸಿದ ಕೆಲವು ಕನ್ನಡ & ತೆಲುಗು ಸಿನಿಮಾ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಲಾಗಿದೆ. ಅವರ ಕ್ರೇಜ್ ಜಾಸ್ತಿಯಾಗಲು ಇದು ಕೂಡ ಒಂದು ಕಾರಣ ಎನ್ನಲಾಗಿದೆ. ಈವರೆಗೆ ನಟಿ ದಿಶಾ ಪಟಾನಿ, ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಮನುಶಿ ಚಿಲ್ಲರ್ ಈ ಸಾಧನೆ ಮಾಡಿದ್ದಾರೆ.
ಇನ್ನು ಇತ್ತೀಚಿಗೆ ಹೆಚ್ಚಿನ ಕ್ರೇಜ್ ಪಡೆದುಕೊಳ್ಳಲು ರಶ್ಮಿಕಾ ಮಂದಣ್ಣ ಅಲ್ಲಿ ಪ್ರಸಾರವಾಗುವ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಇತ್ತೀಚೆಗೆ ‘ಟಕರ್’ ಎಂಬ ಪಂಜಾಬಿ ರಾಪ್ ಹಾಡಿನಲ್ಲಿ ನಟಿಸಿದ್ದಾರೆ. ಈ ವಿಷಯವನ್ನು ರಶ್ಮಿ ಮಂದಣ್ಣ ಸ್ವತಃ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
Ladies and gentlemen presenting to you. 🗣 🥳✨@Its_Badshah @jonitamusic @AmitUchana @Saga_Hits @SumeetSinghM @thisisysr @yrf @MTVBeats @FeverFMOfficial pic.twitter.com/0xBJymd1Td
— Rashmika Mandanna (@iamRashmika) January 13, 2021
ಇದಕ್ಕೆ ಸಂಬಂಧಿಸಿದಂತೆ ಪ್ರಚಾರದ ಭಾಗವಾಗಿ ಅವರು ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಲಿದ್ದಾರೆ . ರಾಪ್ ಹಾಡಿನ ಬ್ಯಾಂಡ್ ಸದಸ್ಯರು ಇದನ್ನು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ ರಶ್ಮಿಕಾ ಮಂದಣ್ಣ ಪಂಜಾಬಿ ರಾಪ್ ಹಾಡನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನು ಓದಿ: ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ!