ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ನಡುವೀಣೆ ಬೀದಿಗೆ ಬನಿದ್ದು, ಹೆಸರು ಬಳಸದೆ, ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿಗೆ ಬಿದ್ದಿದ್ದಾರೆ.
ಹೌದು, ಅದರ ಮುಂದುವರೆದ ಭಾಗವಾಗಿ, ಸದ್ಯ ರಿಷಬ್ ಪಂತ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ‘ನೀವು ನಿಯಂತ್ರಿಸಲಾಗದ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು’ ಎಂಬ ಕೋಟ್ ಪೋಸ್ಟ್ ಮಾಡಿದ್ದಾರೆ. ರಿಷಬ್ ಪಂತ್ ರವರ ಈ ಪೋಸ್ಟ್ ಅನ್ನು ನಟಿ ಊರ್ವಶಿಗೆ ಟಾಂಗ್ ಕೊಡುವುದಕ್ಕಾಗಿಯೇ ಹಂಚಿಕೊಂಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ ಊರ್ವಶಿ, ‘ಆರ್‌ಪಿ’ ತನ್ನನ್ನು ಭೇಟಿಯಾಗಲು ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು ಎಂದು ಹೇಳಿಕೊಂಡಿದ್ದು, ಈ ಸಂದರ್ಶನ ಸಖತ್ ವೈರಲ್ ಆಗಿತ್ತು. ನಂತರ ರಿಷಬ್ ಪಂತ್ ಕೂಡ ನಟಿ ಊರ್ವಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರು ಜನಪ್ರಿಯತೆಗಾಗಿ ಏನೆಲ್ಲ ಸುಳ್ಳು ಹೇಳುತ್ತಾರೆ. ಇನ್ನು, ಸಹೋದರಿ ನನ್ನ ಹಿಂದೆ ಬರುವುದನ್ನು ಬಿಡು, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇದೆ ಎಂದಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಊರ್ವಶಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ರಿಷಭ್ ಪಂತ್ಗೆ ಸರಿಯಾಗಿಯೇ ಟಾಂಗ್ ನೀಡಿದ್ದು, ತಮ್ಮ ಪೋಸ್ಟ್ನಲ್ಲಿ, ತಮ್ಮಯ್ಯ ನೀನು ಕ್ರಿಕೆಟ್ ಅಷ್ಟೇ ಆಡು,ನಿನ್ನಂತಹ ಚಿಕ್ಕ ಹುಡುಗನೊಂದಿಗೆ ಪ್ರೀತಿ ಪ್ರೇಮದಲ್ಲಿ ಬಿದ್ದು ಹಾಳಾಗಲು ನಾನೇನು ಮುನ್ನಿ ಅಲ್ಲ. ರಕ್ಷಾ ಬಂಧನದ ಶುಭಾಶಯಗಳು ಆರ್.ಪಿ ತಮ್ಮಯ್ಯ ಎಂದು ಬರೆದುಕೊಂಡಿದ್ದರು.