ಒಡಿಶಾ : ಖ್ಯಾತ ಕಿರುತೆರೆ ನಟಿಯೊಬ್ಬರು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟಿಯ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಸಾವಿಗೆ ಪ್ರೇಮ ವೈಫಲ್ಯ ಕಾರಣ ಎನ್ನಲಾಗುತ್ತಿದ್ದು, ಈ ಬಗ್ಗೆ ನಾಯಪಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದ ಸೂಸೈಡ್ ನೋಟ್ ವಶಪಡಿಸಿಕೊಳ್ಳಲಾಗಿದೆ. ಸೂಸೈಡ್ ನೋಟ್ನಲ್ಲಿ “ಮಿಸ್ ಯು ಬಾಬಾ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ತುಂಬಾ ಕೆಟ್ಟ ಮಗಳು” ಎಂದು ಬರೆಯಲಾಗಿದೆ. 24 ವರ್ಷದ ರಶ್ಮಿರೇಖಾ ಓಜಾ ಸಾವಿಗೆ ಶರಣಾದ ನಟಿಯಾಗಿದ್ದು, ಈಕೆ ಸಂತೋಷ್ ಪಾತ್ರ ಎಂಬಾತನ ಜೊತೆಗೆ ಲಿವ್ಇನ್ ರಿಲೇಶನ್ ನಲ್ಲಿದ್ದರು ಎನ್ನಲಾಗಿದೆ.