ಬೆಂಗಳುರು: ಇಂದು ಭಾರತೀಯ ಚಿತ್ರರಂಗದ ರಾಷ್ಟೀಯ ಸಿನಿಮಾ ಪ್ರಶಸ್ತಿ ವಿಜೇತೆ ನಿರ್ಮಾಪಕಿ, ಮಾಜಿ ರೂಪದರ್ಶಿ, ನಟಿ ರವೀನಾ ಟಂಡನ್ ಅವರ 46 ನೇ ವರ್ಷದ ಹುಟ್ಟುಹಬ್ಬ. ರವೀನಾ ಟಂಡನ್ ಅವರು ಹಿಂದಿ, ತಮಿಳು, ತೆಲುಗು, ಬೆಂಗಾಲಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡದಲ್ಲೂ ಸಹ ನಟಿಸಿದ್ದಾರೆ.
ರವೀನಾ ಟಂಡನ್ ಅವರು ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಉಪೇಂದ್ರ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ರವೀನಾ ಟಂಡನ್ ಅವರು ಈಗ ಮತ್ತೆ ಕನ್ನಡಕ್ಕೆ ಬಂದಿದ್ದು ಕನ್ನಡದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇಂದು ರವೀನಾ ಟಂಡನ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್-2 ಸಿನಿಮಾದಲ್ಲಿನ ನಟಿ ರವೀನಾ ಟಂಡನ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರು ಟ್ವೀಟ್ ಮಾಡಿ ರವೀನಾ ಟಂಡನ್ ಅವರ ಕೆಜಿಎಫ್-2 ಸಿನಿಮಾದಲ್ಲಿನ ರಮಿಕಾ ಸೇನ್ ಪಾತ್ರದ ಪೋಸ್ಟರ್ ಹಂಚಿಕೊಂಡು ಪವಾರ್ ಹೌಸ್ ರಮಿಕಾ ಸೆನ್ ಪಾತ್ರಕ್ಕೆ ಶುಭಕೋರಿದ್ದು, ರವೀನಾ ಟಂಡನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇನ್ನು ಕೆಜಿಎಫ್-೨ ಸಿನಿಮಾವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
THE Gavel to brutality!!!
Wishing the powerhouse #RamikaSen, @TandonRaveena a very Happy Birthday. #KGFChapter2@VKiragandur @TheNameIsYash @prashanth_neel @SrinidhiShetty7 @duttsanjay @Karthik1423@excelmovies @ritesh_sid @AAFilmsIndia @FarOutAkhtar@VaaraahiCC @hombalefilms pic.twitter.com/xfX7bHpD0h
— Prashanth Neel (@prashanth_neel) October 26, 2020