ಬಹುಭಾಷಾ ನಟಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ಸಂಬಂಧ ಬಗ್ಗೆ ಅಪ್ಡೇಟ್ವೊಂದು ದೊರೆತಿದ್ದು, ಈ ಇಬ್ಬರು ಬೇರೆಯಾಗಿ ಸುಮಾರು 2 ವರ್ಷಗಳೇ ಕಳೆದಿದೆ ಎನ್ನಲಾಗಿದೆ.
ಹೌದು, ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ಸಂಬಂಧ ಮುರಿದು ಬಿದ್ದಿದ್ದರೂ ಇಬ್ಬರು ಸ್ನೇಹಿತರಾಗಿ ಮುಂದುವರಿದ್ದಾರೆ. ಒಬ್ಬರ ಕೆರಿಯರ್ ಗೆ ಇನ್ನೊಬ್ಬರು ಸಪೋರ್ಟ್ ಮಾಡುತ್ತಾರೆ ಎಂದು ಇ ಟೈಮ್ಸ್ ವರದಿ ಮಾಡಿದೆ. ರಶ್ಮಿಕಾ, ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಚಿತ್ರ ಭರ್ಜರಿ ಹಿಟ್ ಆಗಿತ್ತು. ಆ ವೇಳೆ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.
ಇನ್ನು, ಇತ್ತೀಚಿಗೆ ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ಕಾಫಿ ವಿತ್ ಕರಣ್ 7ನೇ ಆವೃತ್ತಿಯಲ್ಲಿ ನಟ ರಶ್ಮಿಕಾ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ವಿಜಯ್ ದೇವರಕೊಂಡ, ‘ನಾವಿಬ್ಬರೂ ಎರಡು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದೇವೆ. ಅವಳು ಡಾರ್ಲಿಂಗ್ ಇದ್ದ ಹಾಗೆ’ ಎಂದಿದ್ದಾರೆ. ಅಲ್ಲದೇ, ‘ನಾನು ಅವಳನ್ನು ತುಂಬಾ ಇಷ್ಟಪಡುತ್ತೇನೆ. ಅವಳು ನನಗೆ ನಿಜವಾಗಿಯೂ ಒಳ್ಳೆಯ ಸ್ನೇಹಿತೆ’ ಎಂದು ವಿಜಯ್ ಎಂದು ಹೇಳಿಕೊಂಡಿದ್ದರು.
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರು ಸೇರಿ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದು, ‘ಗೀತ ಗೋವಿಂದಂ’ ಚಿತ್ರ ಭರ್ಜರಿ ಹಿಟ್ ಆಗಿತ್ತು.