ತೆಲುಗಿನ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ‘ಪುಷ್ಪ’ ಸಿನಿಮಾ ಸಖತ್ ಹಿಟ್ ಆಗಿದ್ದು, ಜೊತೆಗೆ ಅದರಲ್ಲಿನ ಪ್ರತಿಯೊಂದು ಹಾಡುಗಳು, ಸ್ಟೆಪ್ಸ್ ಸಹ ವೈರಲ್ ಆಗಿವೆ.
ಇದೀಗ ಪುಷ್ಪ ಸಿನಿಮಾದ ಜನಪ್ರಿಯತೆಯನ್ನ ಬಳಸಿಕೊಂಡ ಉದ್ಯಮಿಯೊಬ್ಬರು, ಸೀರೆಗಳ ಮೇಲೆ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣರ ಚಿತ್ರ ಅಚ್ಚು ಮಾಡಲಾಗಿದ್ದು, ಗುಜರಾತ್ ಸೂರತ್‌ನ ವಿನ್ಯಾಸಕರೊಬ್ಬರು ಚಿತ್ರದ ಪೋಸ್ಟರ್‌ಗಳೊಂದಿಗೆ ಸೀರೆಗಳನ್ನು ಮುದ್ರಿಸಿದ್ದಾರೆ.
ಸೂರತ್‌ನಲ್ಲಿರುವ ಬಟ್ಟೆ ಮಾರುಕಟ್ಟೆಯು ಅಲ್ಲಿ ಮಾರಾಟವಾಗುವ ಬೃಹತ್ ವೈವಿಧ್ಯಮಯ ಉಡುಪುಗಳಿಗೆ ಹೆಸರುವಾಸಿಯಾಗಿದ್ದು, ಚರಂಜಿತ್ ಕ್ರಿಯೇಷನ್ ಎಂಬ ಅಂಗಡಿಯಲ್ಲಿ, ಪುಷ್ಪಾ ಸಿನಿಮಾದ ಪೋಸ್ಟರ್‌ಗಳನ್ನು ಮುದ್ರಿಸಿದ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಪುಷ್ಪಾ ಚಿತ್ರದ ಜನಪ್ರಿಯತೆಯನ್ನು ನೋಡಿದ ನಂತರ ಸೂರತ್ ಬಟ್ಟೆ ಮಾಲೀಕರಾದ ಮಾಲೀಕ ಚರಣ್‌ಪಾಲ್ ಸಿಂಗ್ ಅವರಿಗೆ ವಿಶಿಷ್ಟವಾದ ಕಲ್ಪನೆ ಹೊಳೆದಿದ್ದು, ಅವರು ಪುಷ್ಪ ಸಿನಿಮಾದ ಉಡುಪಿನ ಕೆಲವು ಮಾದರಿಗಳನ್ನು ತಯಾರಿಸಿದ, ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ಕೆಲವೇ ದಿನದಲ್ಲಿ ಬೇಡಿಕೆ ಹೆಚ್ಚಿದ್ದು, ಸದ್ಯ ಆನ್ಲೈನ್ನಲ್ಲೂ ಈ ಸೀರೆಗಳು ಲಭ್ಯವಿದೆಯಂತೆ.