ಮುಂಬೈ: ಇತ್ತೀಚೆಗೆ ಹಿಂದಿ ಟೆಲಿವಿಷನ್ ಧಾರಾವಾಹಿಗಳಲ್ಲಿನ ಅಭಿನಯದಿಂದ ಜನಪ್ರಿಯತೆಗಳಿಸಿದ್ದ ನಟಿ ಲೀನಾ ಆಚಾರ್ಯ ಮೂತ್ರಪಿಂಡದ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ. ಕೇವಲ 30 ವರ್ಷ ವಯಸ್ಸಾಗಿದ್ದ ನಟಿ ಲೀನಾ ಆಚಾರ್ಯ 2015 ರಿಂದ ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ನಟಿ ಲೀನಾ ಆಚಾರ್ಯ ಅವರು ಕೊನೆಯದಾಗಿ ‘ಕ್ಲಾಸ್ ಆಫ್ 2020’ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದರು. ‘ಸೆಟ್ಜಿ’, ‘ಆಪ್ ಕೆ ಆ ಜೇನ್ ಸೆ’ ಮತ್ತು ‘ಮೇರಿ ಹನಿ ಕರಕ್ ಬೀವಿ’ ಮುಂತಾದ ಧಾರಾವಾಹಿಗಳು ಲೀನಾ ಆಚಾರ್ಯ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದವು.
ನಟಿ ಲೀನಾ ಆಚಾರ್ಯ ಅವರು, ನಟಿ ರಾಣಿ ಮುಖರ್ಜಿ ಅಭಿನಯದ ‘ಹಿಚ್‌ಹೈಕರ್’ ಸಿನಿಮಾ ಸೇರಿದಂತೆ ಹಲವು ನಟಿಸಿದ್ದಾರೆ ನಟಿಸಿದ್ದಾರೆ. ಮಾಡೆಲಿಂಗ್‌ನಿಂದ ಹಿಂದಿ ಟಿವಿ ಉದ್ಯಮಕ್ಕೆ ಪ್ರವೇಶಿಸಿದ ಅವರು ಹಂತ ಹಂತವಾಗಿ ಬೆಳೆಡಿದ್ದರು.
ಲೀನಾ ಆಚಾರ್ಯ ಅವರ ನಿಧನಕ್ಕೆ ಬಾಲಿವುಡ್ ಚಲನಚಿತ್ರೋದ್ಯಮ ಮತ್ತು ಅವರ ಸಹನಟರು ಕಂಬನಿ ಮಿಡಿದಿದ್ದಾರೆ.