ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯ ಖಳನಾಯಕಿ ಪಾತ್ರದಲ್ಲಿ ಮಿಂಚಿದ್ದ, ಬಿಗ್‌ಬಾಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದ ನಟಿ ಪ್ರಿಯಾಂಕಾ ಈಗ ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದಿರುವ ಸಂಭ್ರಮದಲ್ಲಿದ್ದಾರೆ. ಅವರ ನಟನಾ ಕೌಶಲ್ಯಕ್ಕೆ ಮತ್ತೊಂದು ಅವಕಾಶ ದೊರೆತಿದ್ದು, ‘ಫ್ಯಾಂಟಸಿ’ ಸಿನಿಮಾದ ಮುಖ್ಯ ಪಾತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಈ ಸಿನಿಮಾ ವಿಶಿಷ್ಟವಾಗಿ ಅನುಭವವನ್ನು ನೀಡಿದೆ. ಇದರಲ್ಲಿಯೂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ನಿರ್ದೇಶಕ ಗುರುದೇಶ್ ಪಾಂಡೆ ಅವರ ಜೊತೆ ಸಯಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪವನ್ ಕುಮಾರ್ ಆರ್ ಅವರು ಪೂರ್ಣ ಪ್ರಮಾಣದ ನಿರ್ದೇಶಕರಾಗಿ ‘ಫ್ಯಾಂಟಸಿ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾಗೆ ಸ್ವತಃ ಅವರೇ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ಪವನ್ ಡ್ರೀಮ್ ಫಿಲಂ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕಾ, ಡ್ರಾಮಾ ಜೂನಿಯರ್ ಸೀಸನ್ 3 ಭಾಗವಹಿಸಿದ್ದ ಅನುರಾಗ್, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದಲ್ಲಿ ನಟಿಸಿದ್ದ ಹೇಮಂತ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: 21 ವರ್ಷದ ಬಳಿಕ ಪುನೀತ್ ಜೊತೆ ನಟಿಸುತ್ತಿರುವೆ…!