ಬಹುಭಾಷಾ ನಟಿ ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಮತ್ತೆ ಸಹಾಯಕೋರಿ ಕನ್ನಡದ ಹಿರಿಯ ಕಲಾವಿದರಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇತ್ತೀಚಿಗೆ ನಟಿ ವಿಜಯಲಕ್ಷ್ಮಿ ಅವರು ಚೆನ್ನೈ ನಲ್ಲಿ ರಾಜಕೀಯ ಮುಖಂಡನೊಂದಿಗೆ ಘರ್ಷಣೆ ನಡೆಸಿ, ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಬಾರಿ ಸುದ್ದಿಯಲ್ಲಿದ್ದರು. ಅಷ್ಟೇ ಅಲ್ಲದೆ ವಿಜಯಲಕ್ಷ್ಮಿ ತಂಗಿದ್ದ ಲಾಡ್ಜ್ ಮಾಲೀಕರು ಲಾಡ್ಜ್ ಬಾಡಿಗೆ ಕಟ್ಟಿಲ್ಲ ಎಂದು ನಟಿಯ ವಿರುದ್ಧ ನೀಡಿದ್ದರು.
ಆದರೆ ಈಗ ‘ವಿಜಯಲಕ್ಷ್ಮಿ ಅವರ ಸಹೋದರಿ ಉಷಾದೇವಿ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಇತ್ತೀಚಿಗೆ ಸರ್ಜರಿ ಮಾಡಲಾಗಿದ್ದು, ಆಪರೇಷನ್ ಸಕ್ಸಸ್ ಆಗದೆ ಉಷಾದೇವಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಿಕಿತ್ಸೆಗೆ ಹಣವಿಲ್ಲ ಯಾರಾದರೂ ಸಹಾಯ ಮಾಡಿ’ ಎಂದು ನಟಿ ವಿಜಯಲಕ್ಷ್ಮಿ ಅಂಗಾಲಾಚಿದ್ದಾರೆ.
ಅದರಲ್ಲೂ ಈ ವಿಚಾರ ನಟ ಶಿವರಾಜ್ ಕುಮಾರ್ ಅವರಿಗೆ ತಿಳಿಸಿ ಎಂದು ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.