Pavithra Gowda arrested : ನಟ ದರ್ಶನ್ ಗೆಳತಿ, ರೇಣುಕಾಸ್ವಾಮಿ ಕೊಲೆ ಕೇಸ್ನ A1 ಆರೋಪಿ ಪವಿತ್ರಾ ಗೌಡ ಜಾಮೀನು ರದ್ದುಗೊಂಡ ಬೆನ್ನಲ್ಲೇ ಅವರನ್ನು ಆರ್ಆರ್ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿನಗರದ ಮನೆಯಲ್ಲೇ ಅವರನ್ನು ಬಂಧಿಸಲಾಗಿದೆ. ಗೋವಿಂದರಾಜನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪವಿತ್ರಾರನ್ನು ಅರೆಸ್ಟ್ ಮಾಡಲಾಗಿದ್ದು, ಅವರನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬರಲಿದ್ದಾರೆ.
ಫಲಿಸಲಿಲ್ಲ ಪ್ರಾರ್ಥನೆ.. ಪವಿತ್ರಾ ಗೌಡ ಕಣ್ಣೀರು
ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದ್ದು, ಪವಿತ್ರಾ ಗೌಡ ಅವರನ್ನು ಆರ್ಆರ್ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸತ್ಯಕ್ಕೆ ಜಯ ಸಿಗುತ್ತೆ ಎನ್ನುವ ನಂಬಿಕೆ ನನಗಿದೆ ಎಂದು ತೀರ್ಪಿಗೂ ಮುನ್ನವೇ ಪವಿತ್ರಾ ಪೋಸ್ಟ್ ಮಾಡಿದ್ರು. ಅವರ ಜಾಮೀನು ವಜಾಗೊಂಡಿದ್ದು, ಮತ್ತೆ ಜೈಲು ಪಾಲಾಗಿದ್ದಾರೆ. ತೀರ್ಪು ನೋಡಿ ಪವಿತ್ರಾ ಗೌಡ ಹಾಗೂ ಮನೆಯವರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.




