ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ನಿನ್ನೆ ವಿಶ್ವದಾದ್ಯಂತ ತೆರೆ ಕಂಡ ‘ಪಠಾಣ್’ ಸಿನಿಮಾ ಹೊಸ ದಾಖಲೆ ಬರೆಯುವತ್ತ ಸಾಗಿದೆ. ತನ್ನ ಮೊದಲ ದಿನದಲ್ಲೇ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಸುಮಾರು 54 ಕೋ.ರೂ ಬಾಚಿಕೊಂಡಿದೆ.
ಬಾಕ್ಸ್ ಆಫೀಸ್ ಇಂಡಿಯಾ ವರದಿ ಪ್ರಕಾರ, ಬಿಡುಗಡೆಯಾದ ಮೊದಲ ದಿನವೇ 51 ರಿಂದ 52 ಕೋಟಿ ರೂ ಗಳಿಸಿದೆ. 4 ವರ್ಷಗಳ ಬಳಿಕ ಶಾರುಖ್ ಖಾನ್ ಕಮ್ ಬ್ಯಾಕ್ ಮಾಡಿರುವ ಚಿತ್ರ ಇದಾಗಿದ್ದು, ದೇಶದಾದ್ಯಂತ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ‘ಪಠಾಣ್’ ಚಿತ್ರಕ್ಕೆ ದಾಖಲೆಯ ಮುಂಗಡ ಬುಕ್ಕಿಂಗ್ ಆಗಿತ್ತು. ಹಾಗೆಯೇ, ಇಂದು ಗಣರಾಜ್ಯೋತ್ಸವ ಹಿನ್ನಲೆ ರಜೆ ಇರುವುದರಿಂದ ಗಳಿಕೆಯ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.
ಇನ್ನು ಆಸ್ಟ್ರೇಲಿಯಾದಲ್ಲಿ 600k ಡಾಲರ್ ಹಾಗೂ ಯುಎಸ್‌ನಲ್ಲಿ 1 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಸದ್ಯ ಪಠಾಣ್ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಲಿದೆಯಾ ಕಾದು ನೋಡಬೇಕು.