ಬಿಗ್ಬಾಸ್ ಕನ್ನಡ ಒಟಿಟಿ ಮನೆಯಿಂದ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಪ್ರತಿವಾರವೂ ಮೂಡುತ್ತದೆ. ಅದರಲ್ಲೂ ಕೊನೆಯ ವಾರ ಸಮೀಪಿಸಿದಾಗ ಯಾರು ಬಿಗ್ಬಾಸ್ ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗುತ್ತದೆ. ಅದರಂತೆ ಈ ವಾರ ನಂದಿನಿ ಎಲಿಮಿನೇಟ್ ಆಗಿದ್ದಾರೆ.
ಹೌದು, ದಿನದಿಂದ ದಿನಕ್ಕೆ ಸ್ಪರ್ಧಿಗಳ ಮಧ್ಯೆ ಜಟಾಪಟಿ ಕೂಡ ಜೋರಾಗಿತ್ತು. ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳೇ ಆದ ಕಾರಣ ಯಾರೇ ಹೊರ ಹೋದರು ಮನೆಯವರಿಗೆ ಹಾಗೂ ವೀಕ್ಷಕರಿಗೆ ಬೇಸರ ಆಗುತ್ತದೆ. ಆದರೂ ಎಲಿಮಿನೇಷನ್ ಆಗಲೇಬೇಕಾಗಿದ್ದು, ಈಗ ಐದನೇ ವಾರದ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ನಂದಿನಿ ಔಟ್ ಆಗಿದ್ದಾರೆ
ಇದೀಗ ಪ್ರತಿ ವಾರದ ಎಲಿಮಿನೇಷನ್ ಪದ್ಧತಿಯಂತೆ ಈ ವಾರ, ನಂದಿನಿ ಸ್ಪರ್ಧೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದು, ಟಾಸ್ಕ್, ಮನರಂಜನೆ ಸೇರಿ ಪ್ರತಿ ವಿಚಾರದಲ್ಲೂ ಆಕ್ಟೀವ್ ಆಗಿದ್ದ ಇವರು, ಹಿಂದಿ ರಿಯಾಲಿಟಿ ಶೋ ‘ರೋಡೀಸ್’ನ ವಿಜೇತೆ ಕೂಡ ಆಗಿದ್ದಾರೆ.