ಹೌದು, ಕನ್ನಡ ಚಲನಚಿತ್ರದಲ್ಲಿ ಇತ್ತೀಚಿಗೆ ಸುದ್ದಿ ಆಗುತ್ತಿರುವ ಯುವ 23 ವರ್ಷದ ಪ್ರತಿಭೆ ನಾಗಭರಣ ಗುಬ್ಬಿ. ಇವರು ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ಅವರು, ವಿದ್ಯಾಭ್ಯಾಸದಲ್ಲಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಮುಗಿಸಿ ನಂತರ ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮೋ ಮುಗಿಸಿ ಈಗ ಬೆಂಗಳೂರಿನ ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ತಂದೆ ತಾಯಿಯ ಬೆಂಬಲದೊಂದಿಗೆ ಚಿಕ್ಕವಯಸ್ಸಿನಿಂದಲೂ ವಿದ್ಯಾಭ್ಯಾಸದ ಜೊತೆಗೆ ಅಭಿನಯ, ಕ್ರೀಡೆ, ಎನ್.ಸಿ.ಸಿ, ಯೋಗ, ಈಜು, ವಿಜ್ಞಾನ .. ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದರು. ಡಿಪ್ಲೋಮೋ ವ್ಯಾಸಂಗ ಮಾಡುವಾಗ ಸಿನಿಮಾ ಕಡೆಗೆ ತನ್ನ ಒಲವನ್ನು ಹೆಚ್ಚಿಸಿಕೊಂಡು ಇವರು ಆರ್ಕೆಸ್ಟ್ರಾ ,ಕಿರುತೆರೆಯಲ್ಲಿ ಟೆಕ್ನಿಶನ್, ಸಹಾಯಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟರು.
ತದನಂತರ ಬೆಂಗಳೂರಿಗೆ ಇಂಜಿನಿಯರಿಂಗ್ ಮಾಡಲು ಬಂದಾಗ ಓದುತ್ತಿದ್ದ ಕಾರಣ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ಸ್ವಯಂಪ್ರೇರಿತವಾಗಿ ವಿಭಿನ್ನ ಸಿನಿಮಾ ಪ್ರಚಾರ ಮಾಡಲು ಆರಂಭಿಸಿದರು. ಪ್ರಚಾರಕ್ಕೆ ಅರಸು ಕ್ರಿಯೇಷನ್ ಹರೀಶ್ ಅರಸು ಪಿಆರ್ ಓ ಅವರು ಸಹಾಯ ದೊಂದಿಗೆ ದೊಡ್ಡ ದೊಡ್ಡ ಸುಮಾರು 30 ಚಿತ್ರಗಳನ್ನು ಪ್ರಚಾರ ಮಾಡಿದ್ದ ಇವರನ್ನು, ನಿರ್ದೇಶಕರಾದ ಮನು ಕಲ್ಯಾಡಿ ಅವರು ಗುರುತಿಸಿ ಅವರ ಮನೋರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಸಿನಿಮಾ ಮೂಲಕ ಮೊದಲ ಬಾರಿಗೆ ಪ್ರಚಾರ ಸಂಯೋಜಕರಾಗಿ ಅವಕಾಶ ನೀಡಿದರು. ನಂತರ ಪ್ರಚಾರ ಸಂಯೋಜಕರಾಗಿ ಅಭಿಷೇಕ್ ಶೆಟ್ಟಿ ನಿರ್ದೇಶನದ ಗಜಾನನ ಅಂಡ್ ಗ್ಯಾಂಗ್ ಕೂಡ ಕೆಲಸ ಮಾಡಿದರು. ತದನಂತರ ಸುಮಾರು ಚಿತ್ರಗಳ ಅವಕಾಶಗಳು ಬಂದವು. ಇಂಜಿನಿಯರಿಂಗ್ ಕೊನೆಯ ಹಂತದಲ್ಲಿ ಓದುತ್ತಿರುವ ಕಾರಣ ಮುಂದೂಡಿದರು.
ನಾನು ನನ್ನ ಕೆಲಸವನ್ನು ಬೇರೆಯವರಿಗಿಂತ ವಿಭಿನ್ನವಾಗಿ ಹಾಗೂ ಜನರಿಗೆ ಮುಟ್ಟುವಗೆ ಮಾಡಲು ಪ್ರಯತ್ನಿಸುತ್ತೇನೆ ಅದು ಜನರಿಗೆ ಹಾಗೂ ಸಿನಿಮಾ ತಂಡದವರಿಗೆ ಇಷ್ಟವಾಗುತ್ತಿದೆ. ಡಾಲಿ ಧನಂಜಯ್ , ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಅಮೃತ ಅಯ್ಯಂಗಾರ್ ಇನ್ನು ಮುಂತಾದ ಸೆಲೆಬ್ರಿಟಿಸ್ ಗಳು ನಾನು ಮಾಡಿದ ಪ್ರಚಾರದ ತುಣುಕನ್ನು ಮೆಚ್ಚಿದ್ದಾರೆ.
ಇನ್ನು ಮುಂದೆ ಇನ್ನೂ ಹೆಚ್ಚು ಹೆಚ್ಚು ಸಿನಿಮಾ ಗಳನ್ನು ಪ್ರಚಾರ ಮಾಡುತ್ತೇನೆ ಹಾಗೆ ನಟ ಮತ್ತು ನಿರ್ದೇಶಕನಾಗುವ ಆಸೆ ಕೂಡ ಇದ್ದು ಸದ್ಯದಲ್ಲೇ ದೇವರು ಹಾಗೂ ಎಲ್ಲರ ಆಶೀರ್ವಾದದೊಂದಿಗೆ ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು 23 ವರ್ಷದ ಪ್ರತಿಭೆ ನಾಗಭರಣ ಗುಬ್ಬಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.