ಮುಂಬೈ: ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಸದ್ಯ ಭಾರಿ ಸದ್ದು ಮಾಡುತ್ತಿದೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೆಲವರು ಯುವತಿಯರಿಗೆ ಮೋಸ ಮಾಡುತ್ತಿದ್ದು, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹಲವು ನಟಿಯರು ಆರೋಪ ಮಾಡಿರುವುದು ಗೊತ್ತಿರುವ ವಿಷಯ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ನಂತರ ಇಂತಹ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ನಟಿ ಲುವಿಯಾನಾ ಲೋಧ್ ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ವಿರುದ್ಧ ಸಂಚಲನ ಹೇಳಿಕೆಯನ್ನು ನೀಡಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಮಹೇಶ್ ಭಟ್ ಅವರ ನಿಜವಾದ ಸ್ವಭಾವ ಎಂದು ನಟಿ ಲುವಿಯಾನಾ ಲೋಧ್ ಸಂಚಲನಕಾರಿ ಕಾಮೆಂಟ್ ಪೋಸ್ಟ್ ಮಾಡಿರುವುದು ಚರ್ಚೆಯ ವಿಷಯವಾಗಿದೆ.
ತಾನು ಮಹೇಶ್ ಭಟ್ ಅವರ ಸಂಬಂದಿ ಸುಮಿತ್ ಸಭರ್ವಾಲ್ ಅವರನ್ನು ಮದುವೆಯಾಗಿದ್ದೇನೆ. ಆದರೆ ಅವರು ಡ್ರಗ್ಸ್, ಯುವತಿಯರನ್ನು ಪ್ರಮುಖರಿಗೆ ಸಪ್ಲೆ ಮಾಡುತ್ತಾರೆ ಎಂಬ ವಿಷಯ ತಿಳಿದು ವಿಚ್ಛೇದನ ನೀಡಲು ಸಿದ್ಧವಾಗಿದ್ದೇನೆ ಎಂದು ನಟಿ ಲುವಿಯಾನಾ ಲೋದ್ ಸಂಚಲನ ಹೇಳಿಕೆ ನೀಡಿದ್ದಾರೆ.
ಮಹೇಶ್ ಭಟ್ ಅವರಿಗೆ ಈ ಎಲ್ಲ ವಿಷಯಗಳು ತಿಳಿದಿದ್ದರೂ ಸಹಾಯ ಮಾಡಲಿಲ್ಲ. “ಮಹೇಶ್ ಭಟ್ ಚಿತ್ರರಂಗಕ್ಕೆ ದೊಡ್ಡ ಡಾನ್” ಎಂದು ಅವರು ಹೇಳಿದರು. “ಉದ್ಯಮದಲ್ಲಿ ಎಲ್ಲವೂ ಅವನ ಕೈಯಲ್ಲಿದೆ. ಅವರು ಹಲವಾರು ವ್ಯಕ್ತಿಗಳ ಜೀವನವನ್ನು ಹಾಳು ಮಾಡಿದ್ದಾರೆ ಎಂದು ನಟಿ ಲುವಿಯಾನಾ ಲೋದ್ ಅವರು ಹೇಳಿದ್ದಾರೆ.
ಯಾರಾದರೂ ಮಹೇಶ್ ಭಟ್ ಅವರ ಮಾತನ್ನು ಕೇಳದಿದ್ದರೆ, ಅವರ ಜೀವನದೊಂದಿಗೆ ಆಟವಾಡುವ ತುಂಬಾ ಕೆಟ್ಟ ಪಾತ್ರ ಎಂದು ಲುವಿಯಾನಾ ಲೋಧ್ ಹೇಳಿದ್ದಾರೆ. ಯಾರಾದರೂ ಮಹೇಶ್ ಭಟ್ ಅವರ ವಿರುದ್ಧ ಇದ್ದರೆ, ಒಂದೇ ಒಂದು ಫೋನ್ ಮಾಡಿದರೆ ಸಾಕು, ಅವರಿಗೆ ಸಿನಿಮಾದಲ್ಲಿ ಆಫರ್ ಗಳು ಸಿಗುವುದಿಲ್ಲ. ಈಗ ಅವನು ತನ್ನ ಮೇಲೆ ಸಹ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದು, ನನ್ನ ಮನೆಯಿಂದ ಹೊರ ಹಾಕಲು ಪ್ರಯತ್ನಿಸುತ್ತಿದ್ದಾನೆ ಎಂದು ನಟಿ ಲುವಿಯಾನಾ ಲೋದ್ ಅವರು ಮಹೇಶ್ ಭಟ್ ವಿರುದ್ಧ ಆರೋಪ ಮಾಡಿದ್ದಾರೆ.
ಅಂತಹ ಪರಿಸ್ಥಿತಿಯಲ್ಲಿ ಧೈರ್ಯದಿಂದ ನಾನು ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದೇನೆ ಆದರೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ತನ್ನ ಅಥವಾ ಅವಳ ಕುಟುಂಬಕ್ಕೆ ಏನಾದರೂ ಸಂಭವಿಸಿದಲ್ಲಿ ಅದು ಮಹೇಶ್ ಭಟ್ ಮತ್ತು ಸುಮಿತ್ ಸಭರ್ವಾಲ್ ಅವರೇ ಕಾರಣ ಎಂದು ಲುವಿಯಾನಾ ಲೋದ್ ಹೇಳಿದ್ದಾರೆ.
ಆದರೆ, ಮಹೇಶ್ ಭಟ್ ಅವರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದು, ಸದ್ಯ ಈ ವಿಷಯ ಬಾಲಿವುಡ್ ನಲ್ಲಿ ಭಾರಿ ಸುದ್ದಿಯಾಗಿದೆ. ಕಜ್ರಾರೆ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಲುವಿಯಾನಾ ಲೋಧ್ ಕೆಲವು ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.