ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇದುವರೆಗೆ ಅನೇಕ ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ನಯನತಾರ ಅವರು ತಮ್ಮ ಮುಂದಿನ ಹೊಸ ಚಿತ್ರದಲ್ಲಿ ಲೇಡಿ ಓರಿಯೆಂಟೆಡ್ ನಟಿಸುತ್ತಿದ್ದಾರೆ. ಗೃಹಂ ಖ್ಯಾತಿಯ ಮಿಲಿಂದ್ ರಾವ್ ನಿರ್ದೇಶನದ ‘ನೇಟ್ರಿಕನ್’ ಚಿತ್ರದಲ್ಲಿ ನಯನತಾರಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನೆಟ್ರಿಕನ್ ಎಂದರೆ ಮೂರನೇ ಕಣ್ಣು.
ಇದು ತ್ರಿಲ್ಲರ್ ಸಿನಿಮಾವಾಗಿದ್ದು ಈ ಚಿತ್ರದಲ್ಲಿ ನಯನತಾರಾ ಅಂಧಳಾಗಿ(ಕಣ್ಣಿಲ್ಲದ) ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರವನ್ನು ನಯನತಾರಾ ಅವರ ಭಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದು ನಯನತಾರಾ ಅವರ ವೃತ್ತಿಜೀವನದ 65 ನೇ ಚಿತ್ರ.
ಈ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇನ್ನು ಈ ಸಿನಿಮಾದ ‘ಫಸ್ಟ್ ಲುಕ್‌ಗೆ ಪ್ರತಿಕ್ರಿಯೆ ಬರುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ನಿರ್ಮಾಪಕ ವಿಘ್ನೇಶ್ ಶಿವನ್ ಹೇಳಿದ್ದಾರೆ.
ಇದನ್ನು ಓದಿ: ಜೂನಿಯರ್ ಚಿರು ಆಗಮನ; ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್




