ಅವಳಿ ಮಕ್ಕಳಿಗೆ ಜನ್ಮ ನೀಡಿದ ಫೋಟೋ; ನಟಿ ಮೇಘನಾ ರಾಜ್ ಹೇಳಿದ್ದೇನು…?

ಬೆಂಗಳೂರು: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘನಾ ರಾಜ್ ಅವರು ಆಕ್ಷನ್ ಕಿಂಗ್ ಅರ್ಜುನ್ ಅವರ ಸೋದರಳಿಯ, ನಟ ಚಿರಂಜೀವಿ ಸರ್ಜಾ ಅವರರನ್ನು ಹತ್ತು ವರ್ಷಗಳಿಂದ ಪ್ರೀತಿಸಿ ಮನೆಯವರ…

Meghana Raj

ಬೆಂಗಳೂರು: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘನಾ ರಾಜ್ ಅವರು ಆಕ್ಷನ್ ಕಿಂಗ್ ಅರ್ಜುನ್ ಅವರ ಸೋದರಳಿಯ, ನಟ ಚಿರಂಜೀವಿ ಸರ್ಜಾ ಅವರರನ್ನು ಹತ್ತು ವರ್ಷಗಳಿಂದ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮೇ 2018 ರಲ್ಲಿ ವಿವಾಹವಾದರು. ಆದರೆ ಕಾಲಾಂತರದಲ್ಲಿ ನಟ ಚಿರಂಜೀವಿ ಸರ್ಜಾ ಅವರು 39 ನೇ ವಯಸ್ಸಿನಲ್ಲಿ ದುರಂತವಾಗಿ ನಿಧನರಾದರು. ಈ ಸಮಯದಲ್ಲಿ ನಟಿ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದರು.

ಈಗ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಮೇಘನಾ ರಾಜ್ ಅವಳಿ ಮಕ್ಕಳಿಗೆ ಜನ್ಮ ನೀಡಿದ ಫೋಟೋ ಮತ್ತು ನಟ ಧ್ರುವ್ ಸರ್ಜಾ ಮತ್ತು ಅವರ ಪತ್ನಿ ಹೊತ್ತೊಯ್ಯುವ ಫೋಟೋಗಳನ್ನು ಸಹ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೋಗಳ ಕುರಿತು, ಮಾಧ್ಯಮ ವರದಿಗಳ ಮೇಲೆ ನಟಿ ಮೇಘನಾ ರಾಜ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ನಟಿ ಮೇಘನಾ ರಾಜ್ ಅವರು “ಎಲ್ಲರಿಗೂ ನಮಸ್ಕಾರ … ನಾನು ವಿಷಯಗಳ ಬಗ್ಗೆ ಮಾತನಾಡಿ ಸ್ವಲ್ಪ ಸಮಯವಾಗಿದೆ … ನಾನು ಶೀಘ್ರದಲ್ಲೇ ಮಾಡುತ್ತೇನೆ … ಅಲ್ಲಿಯವರೆಗೆ ನನ್ನ ಅಭಿಮಾನಿಗಳು ಮತ್ತು ಅನುಯಾಯಿಗಳಲ್ಲಿ ವಿನಂತಿಸುವುದೇನೆಂದರೆ ವೀಕ್ಷಣೆಗಳನ್ನು ಪಡೆಯಲು ಸತ್ಯವನ್ನೇ ತಿಳಿಸುವುದಾಗಿ ಹೇಳಿಕೊಳ್ಳುವ ಯಾವುದೇ ವೀಡಿಯೊಗಳು ಅಥವಾ ಸುದ್ದಿಗಳಿಗೆ ಕಿವಿಗೊಡದಿರಿ. ನನ್ನ ಅಥವಾ ನನ್ನ ಕುಟುಂಬ ಸದಸ್ಯರ ಬಗ್ಗೆ ಮಾಹಿತಿಯನ್ನು ನಾನೆ ನೇರವಾಗಿ ತಿಳಿಸತ್ತೇನೆ ” ಎಂದು ಟ್ವೀಟ್ ಮಾಡಿದ್ದಾರೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.