ನವದೆಹಲಿ: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಾಯಕಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ತನ್ನ ಸೌಂದರ್ಯ ಮತ್ತು ಅಭಿನಯಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದ ‘ಮಹಾನಟಿ’ ಸಿನಿಮಾ ಖ್ಯಾತಿಯ ನಾಯಕಿ ಕೀರ್ತಿ ಸುರೇಶ್ ಅವರು ಫೋರ್ಬ್ಸ್‌ನ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
28 ರ ಹರೆಯದ ನಟಿ ಕೀರ್ತಿಸುರೇಶ್ ಅವರು ಇತ್ತೀಚೆಗೆ ಮನರಂಜನಾ ವಿಭಾಗದಲ್ಲಿ ಫೋರ್ಬ್ಸ್ ಇಂಡಿಯಾ 2021 ಪಟ್ಟಿಯಲ್ಲಿ 28 ನೇ ಸ್ಥಾನ ಪಡೆದಿದ್ದಾರೆ. ಇನ್ನು ಬಾಲಿವುಡ್ ನಟಿ ಟ್ರಿಪ್ಟಿ ಡಿಮ್ರಿ 26 ನೇ ಸ್ಥಾನದಲ್ಲಿದ್ದಾರೆ. ‘ಡಿಜಿಟಲ್ ಕಂಟೆಂಟ್ ಕ್ರಿಯೇಟರ್’ ಗಾಗಿ ಗುರುತಿಸಿಕೊಂಡಿರುವ ಯೂಟ್ಯೂಬರ್ ಆಶಿಶ್ ಚಂಚಲಂ ಅವರನ್ನು ಫೋರ್ಬ್ಸ್ ವಿಭಾಗದಲ್ಲಿ ಹೆಸರಿಸಲಾಗಿದೆ.
ಕೀರ್ತಿ ಸುರೇಶ್ ಕೇರಳ ಮೂಲದವರಾಗಿದ್ದು, ಬಾಲ ನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದಳು. ನಂತರ ಕೊನ್ನಲ್ಲು ಫ್ಯಾಷನ್ ಡಿಸೈನಿಂಗ್ ಕಡೆಗೆ ಹೋದರು, 2013 ರಲ್ಲಿ ಮಲಯಾಳಂ ಚಿತ್ರ ‘ಗೀತಾಂಜಲಿ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. 2016 ರಲ್ಲಿ ತೆಲುಗಿನ ‘ನೇನು ಶೈಲಾಜ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಯಶಸ್ವಿಯಾದರು. ಪ್ರಸ್ತುತ ಕೀರ್ತಿ ಸುರೇಶ್ ತೆಲುಗು, ತಮಿಳು ಮತ್ತು ಮಲಯಾಳಂನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಮಹಾನಟಿ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ಕೀರ್ತಿ ಸುರೇಶ್ ಅವರು ರಾಷ್ಟ್ರೀಯ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೀರ್ತಿ ಸುರೇಶ್ ಪ್ರಸ್ತುತ ಮಲಯಾಳಂ ಚಿತ್ರ ‘ವಾಶಿ’, ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟಾ’ ಚಿತ್ರ, ನಿತಿನ್ ಅಭಿನಯದ ‘ರಂಗ್ಡೆ’ ಚಿತ್ರದಲ್ಲಿ ನಟಿಸಲಿದ್ದಾರೆ. ಅವರು ‘ಗುಡ್ ಲಕ್ ಸಖಿ’ ಮತ್ತು ‘ಐನಾ ಇಶ್ತಮ್ ನುವ್ವು’ ಚಿತ್ರಗಳಲ್ಲೂ ಸಹ ಕೆಲಸ ಮಾಡುತ್ತಿದ್ದಾರೆ.