ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮ ಶುರುವಾಗಿ ಒಂದು ವಾರ ಕಳೆದಿದ್ದು, ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆ ಕೂಡ ಮುಕ್ತಾಯವಾಗಿದ್ದು, ಮೊದಲ ಎಲಿಮಿನೇಷನ್ ಮುಗಿದಿದೆ. ಮೊದಲ ವಾರ ‘ಬಿಗ್ ಬಾಸ್’ ಮನೆಯಿಂದ ಕಿರಣ್ ಯೋಗೇಶ್ವರ್ ಹೊರ ಹೋಗಿದ್ದಾರೆ.
ಹೌದು, ಬಿಗ್‌ಬಾಸ್ ಶೋನಲ್ಲಿ ಈ ವಾರ 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಮೊದಲ ವಾರವೇ ಕಿರಣ್ ಯೋಗಿಶ್ವರ್ ಮನೆಯಿಂದ ಹೊರ ಹೋಗಿದ್ದಾರೆ. ಅತಿ ಕಡಿಮೆ ವೋಟ್ಸ್ ಪಡೆದಿದ್ದ ಇವರು ರಾಜಸ್ಥಾನ ಮೂಲದ ಮಾಡೆಲ್ ಆಗಿದ್ದಾರೆ. ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಕಿರಣ್ ಇವರಿಗೆ ಅತಿ ಕಡಿಮೆ ವೋಟ್ಸ್ ಪಡೆದಿದ್ದರು.
ಮಾಡೆಲ್ ಕಿರಣ್ ಯೋಗೇಶ್ವರ್ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಇತರೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕೂಡ ಕಿರಣ್ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಂತಿಮವಾಗಿ ಅತಿ ಕಡಿಮೆ ವೋಟ್ ಬಂದಿರುವುದು ಕೂಡ ಅವರಿಗೆ. ಆದ್ದರಿಂದ ಮೊದಲ ವಾರವೇ ಅವರ ಬಿಗ್ ಬಾಸ್ ಪಯಣ ಅಂತ್ಯವಾಗಿದ್ದು, ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಎಲಿಮಿನೇಷನ್ ಘೋಷಿಸಿದರು.