ಲಾಸ್ ಏಂಜಲೀಸ್: ಆಮೆರಿಕಾದ ಖ್ಯಾತ ನಟಿ ಕಿಮ್ ಕರ್ಡಾಶಿಯನ್ ತಮ್ಮ ಮೂರನೇ ಪತಿ, ಖ್ಯಾತ ರ್ಯಾಪ್ ಗಾಯಕ ಕಾನ್ಯೆ ವೆಸ್ಟ್ ಅವರ ಜತೆಗಿನ 7 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಚೇಧನ ನೀಡಲು ನಿರ್ಧರಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಿಮ್ ಕರ್ಡಾಶಿಯನ್ ಅವರು ತಮ್ಮ ನಾಲ್ವರೂ ಮಕ್ಕಳನ್ನು ಇಬ್ಬರೂ ಸೇರಿ ಪೋಷಿಸಲು ಇಚ್ಛಿಸಿದ್ದು ಅವಕಾಶ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿದ್ದಾರೆ ಎನ್ನಲಾಗಿದೆ.
ರ್ಯಾಪ್ ಗಾಯಕ ಕಾನ್ಯೆ ವೆಸ್ಟ್ ಅವರಿಗೆ ಮಾನಸಿಕ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಇಬ್ಬರ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು ಎಂದು ಅಮೇರಿಕಾದ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಗಾಯಕ ಕಾನ್ಯೆ ವೆಸ್ಟ್ ಅವರು ತಾನು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದದಾಗಿ ಹೇಳಿಕೊಂಡಿದ್ದರು.
ಕಳೆದ ಕೆಲ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಕಿಮ್ ಕರ್ಡಾಶಿಯನ್ ಮತ್ತು ಕಾನ್ಯೆ ವೆಸ್ಟ್ ದಂಪತಿ, ದಿನನಿತ್ಯದ ಬಾಂಧವ್ಯದ ಬಗ್ಗೆ ಕೌನ್ಸೆಲಿಂಗ್ ಪಡೆಯುತ್ತಿದ್ದರು.ಇವರಿಬ್ಬರು 2014ರ ಮೇ ತಿಂಗಳಿನಲ್ಲಿ ಇಟಲಿಯಲ್ಲಿ ವಿವಾಹ ಮಾಡಿಕೊಂಡಿದ್ದರು. ನಟಿ ಕಿಮ್ ಕರ್ಡಾಶಿಯನ್ ಅವರಿಗೆ ಇದು ಮೂರನೇ ವಿವಾಹ ವಿಚ್ಛೇದನವಾಗಿದ್ದು, ಗಾಯಕ ಕಾನ್ಯೆ ವೆಸ್ಟ್ ಅವರಿಗೆ ಮೊದಲ ವಿಚ್ಛೇದನವಾಗಿದೆ.