ತಿರುವನಂತಪುರಂ: ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ ಕೇರಳ ಹೈಕೋರ್ಟ್‌ನಲ್ಲಿ ಜಾಮೀನು ನೀಡಲಾಗಿದ್ದು, ವಂಚನೆ (ಚೀಟಿಂಗ್) ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಕೇರಳ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ಸನ್ನಿ ಲಿಯೋನ್ ಅವರು 2019 ರಲ್ಲಿ ಕೊಚ್ಚಿಯಲ್ಲಿ ನಡೆಯಲಿರುವ ಪ್ರೇಮಿಗಳ ದಿನದ (Valentine’s Day) ಸಮಾರಂಭದಲ್ಲಿ ಭಾಗವಹಿಸುವುದಾಗಿ ಹೇಳಿ 29 ಲಕ್ಷ ರೂ. ತೆಗೆದುಕೊಂಡು, ಭಾಗವಹಿಸಿಲ್ಲ ಎಂದು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಸನ್ನಿ ಲಿಯೋನ್ ವಿರುದ್ಧ ದೂರು ನೀಡಿದ್ದು ಎಲ್ಲರಿಗು ತಿಳಿದ ವಿಷಯ.
ಈವೆಂಟ್ ಕಂಪೆನಿಯು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿಯ ಸೆಕ್ಷನ್ 420 ರ ಅಡಿಯಲ್ಲಿ ಸನ್ನಿ ಲಿಯೋನ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಟಿವಿ ಕಾರ್ಯಕ್ರಮಕ್ಕಾಗಿ ಇತ್ತೀಚೆಗೆ ತಿರುವನಂತಪುರಂಗೆ ಬಂದ ಸನ್ನಿ ಲಿಯೋನ್ ಅವರನ್ನು ಪ್ರಶ್ನಿಸಿದ್ದಾರೆ. ಆದರೆ, ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಂಗಳವಾರ ಕೇರಳ ಹೈಕೋರ್ಟ್‌ನ್ನು ಸಂಪರ್ಕಿಸಿದ್ದಾರೆ. ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಸನ್ನಿ ಲಿಯೋನ್ ಅವರನ್ನು ಬಂಧಿಸಬಾರದು ಎಂದು ಆದೇಶಿಸಿದೆ. ಸನ್ನಿ ಲಿಯೋನ್ ಅವರಿಗೆ ಮುಂಚಿತವಾಗಿ ನೋಟಿಸ್ ನೀಡುವಂತೆ ಸೂಚಿಸಲಾಗಿದೆ.