ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರ; ಪ್ರೇಮಕವಿ ಕೆ.ಕೆಲ್ಯಾಣ್ ಪ್ರತಿಕ್ರಿಯೆ..!

ಬೆಂಗಳೂರು: ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಸಾಂಸಾರಿಕ ಜೀವನದಲ್ಲಿ ಸಂಬಂಧಿಸಿದಂತೆ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯ ಅವರು ಕೆ.ಕಲ್ಯಾಣ್ ವಿರುದ್ಧ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ್ದರು. ಅಶ್ವಿನಿ ಅವರು ಅರ್ಜಿಯಲ್ಲಿ…

k kalyan vijayaprabha

ಬೆಂಗಳೂರು: ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಸಾಂಸಾರಿಕ ಜೀವನದಲ್ಲಿ ಸಂಬಂಧಿಸಿದಂತೆ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯ ಅವರು ಕೆ.ಕಲ್ಯಾಣ್ ವಿರುದ್ಧ ಬೆಳಗಾವಿಯ ಕೌಟುಂಬಿಕ
ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ್ದರು. ಅಶ್ವಿನಿ ಅವರು ಅರ್ಜಿಯಲ್ಲಿ ನನ್ನ ಪತಿ ದೈಹಿಕ, ಮಾನಸಿಕವಾಗಿ ಹಿಂಸಿಸುತ್ತಿದ್ದು, ವಿಚ್ಛೇದನ ಕೊಡಿಸಿ ಎಂದು ಮನವಿ ಮಾಡಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರ ಸಾಹಿತಿ, ಪ್ರೇಮಕವಿ ಕೆ.ಕೆಲ್ಯಾನ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ದಾಂಪತ್ಯದಲ್ಲಿ ಬಿರುಕು ಬಂದಿದ್ದು ಅಚ್ಚರಿಯಾಗಿದೆ ಈ ಗೊಂದಲ ಶೀಘ್ರದಲ್ಲಿಯೇ ಬಗೆಹರಿಯುತ್ತದೆ. ನನ್ನ ಪತ್ನಿ ಅಷ್ವಿನಿ ನನ್ನ ಮೇಲೆ ಕೆಲವೊಂದು ಆರೋಪ ಮಾಡಿದ್ದಾರೆ. ಅದರ ಬಗ್ಗೆಯೂ ನಾನು ಇಂದು ಸ್ಪಷ್ಟಿಕರಣ ನೀಡುತ್ತೇನೆ ಎಂದು ಕೆ.ಕಲ್ಯಾಣ್ ಅವರು ಹೇಳಿದ್ದಾರೆ.

ವಾಸ್ತವಾಂಶ, ಸತ್ಯ, ಧರ್ಮ, ಯಾವತ್ತಿದ್ದರೂ ಉಳಿಯುತ್ತೆ. ನನ್ನ ಕುಟುಂಬದಲ್ಲಿ ಹಲವು ಸಣ್ಣಪುಟ್ಟ ಸಮಸ್ಯೆ ಬಂದಿವೆ. ಎಲ್ಲವನ್ನೂ ಬಗೆಹರಿಸಿಕೊಂಡು ಜೀವನ ಮಾಡುತ್ತಿದ್ದೆವು. ಈಗ ಬಂದಿರುವ ಗೊಂದಲ ಕೂತು ಬಗೆಹರಿಸಿಕೊಳ್ಳುತ್ತೇವೆ. ನನ್ನ ಪತ್ನಿಗೆ ಕೌನ್ಸಲಿಂಗ್ ಮಾಡಿದರೆ ಎಲ್ಲ ಸರಿಯಾಗುತ್ತೆ. ನಾನು ಇಂದಿಗೂ ನನ್ನ ಪತ್ನಿ ಜೊತೆ ಮಾತನಾಡುತ್ತಿದ್ದೇನೆ ಎಂದು ಚಿತ್ರ ಸಾಹಿತಿ, ಪ್ರೇಮಕವಿ ಕೆ.ಕಲ್ಯಾಣ್ ಪ್ರತಿಕ್ರಿಯೆ ನೀಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.