ಮುಂಬೈ: ಬಾಲಿವುಡ್ ಚಿತ್ರರಂಗದ ಹಾಟ್ ಬ್ಯೂಟಿ ನಟಿ ನೋರಾ ಫತೇಹಿ ತನ್ನ ಸೌಂದರ್ಯದಿಂದ ಐಟಂ ಸಾಂಗ್ ಮೂಲಕ ಯುವಕರ ಹಾಟ್ ಫೆವರೇಟ್ ಆಗಿದ್ದಾರೆ.
ಹಾಟ್ ಬ್ಯೂಟಿ ನಟಿ ನೋರಾ ಫತೇಹಿ ಅವರು ಬಾಲಿವುಡ್ ಚಿತ್ರರಂಗದಿಂದ ದಕ್ಷಿಣ ಭಾರತಕ್ಕೂ ಲಗ್ಗೆಯಿಟ್ಟಿದ್ದು,
ಟಾಲಿವುಡ್ ನಲ್ಲಿ ತೆಲುಗು ಸಿನಿಮಾ ‘ಬಾಹುಬಲಿ’ ಯಲ್ಲಿ ಮನೋಹರಿ ಸಾಂಗ್ ಸೇರಿದಂತೆ ಟೆಂಪರ್, ಕಿಕ್ 2 ಸಿನಿಮಾದಲ್ಲಿ ಕೂಡ ಹಾಡಿಗೆ ತನ್ನ ಸೊಂಟವನ್ನು ಬಳುಕಿಸಿ ಯುವಕರನ್ನು ತನ್ನ ಸೌಂದರ್ಯದಿಂದ ಹುಚ್ಚರಂತೆ ಮಾಡಿದ್ದಾಳೆ.
ನಟಿ ನೋರಾ ಫತೇಹಿ ತನ್ನ ಇತ್ತೀಚಿನ ಹಾಟ್ ಲುಕ್‌ಗಳನ್ನು ಕಾಲಕಾಲಕ್ಕೆ ಪೋಸ್ಟ್ ಮಾಡುವ ಮೂಲಕ ಯಾವಾಗಲು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಅವರು ಹಂಚಿಕೊಂಡ ವೀಡಿಯೊ ಪ್ರಸ್ತುತ ಸೋಷಿಯಲ್ ಮೀಡಿಯದಲ್ಲಿ ಭಾರಿ ವೈರಲ್ ಆಗುತ್ತಿದೆ.
ಯುರೋಪ್ ಪ್ರವಾಸದಲ್ಲಿ ನಿರತರಾಗಿರುವ ನೋರಾ ಫತೇಹಿ, ಬೀಚ್ ನಲ್ಲಿ ಕುಣಿದು ಕುಪ್ಪಳಿಸಿ ಆನಂದಿಸುತ್ತಿದ್ದಾರೆ. ತನ್ನ ಮೇಕಪ್ ಮ್ಯಾನ್ ಮಾರ್ಕೊ ಪೆಡ್ರೊ ಜೊತೆ ನೃತ್ಯ ಮಾಡುತ್ತಾ, ಸೌಂದರ್ಯ ಸ್ಪರ್ಧೆಗೆ ಇಳಿದವರಂತೆ ನೃತ್ಯ ಮಾಡುತ್ತಿರುವ ವೀಡಿಯೊಗಳನ್ನು ತನ್ನ ಸೋಷಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದಾಳೆ. ಅವಳು ಬೀಚ್ ನಲ್ಲಿ ತನ್ನ ಮೇಕಪ್ ಮ್ಯಾನ್ ಮಾರ್ಕೊ ಪೆಡ್ರೊ ಅವರಿಗೆ ಕೆಲವು ಸ್ಟೆಪ್ಸ್ ಕಲಿಸುತ್ತಿರುವುದಾಗಿ ಹೇಳಿದ್ದಾರೆ.ಈ ವೀಡಿಯೊಗಳು ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.